Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್-ಕಮಲ್ ಹಾಸನ್ ಮೀಟಿಂಗ್! ಏನಿದರ ಮರ್ಮ?

ಅರವಿಂದ್ ಕೇಜ್ರಿವಾಲ್
ನವದೆಹಲಿ , ಗುರುವಾರ, 21 ಸೆಪ್ಟಂಬರ್ 2017 (09:51 IST)
ನವದೆಹಲಿ: ರಾಜಕೀಯಕ್ಕೆ ಧುಮುಕಲು ಬಯಸಿರುವ ಕಮಲ್ ಹಾಸನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರಸ್ಪರ ಭೇಟಿಯಾಗುತ್ತಿರುವುದು ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.


ತಮಿಳು ನಟ ಕಮಲ್ ಹಾಸನ್ ಈಗಾಗಲೇ ಸ್ವಂತ ಪಕ್ಷ ಸ್ಥಾಪಿಸುವುದಾಗಿ ಹೇಳಿಕೊಂಡಿದ್ದರು. ಅಲ್ಲದೆ, ಸೆಪ್ಟೆಂಬರ್ ಕೊನೆಯ ವಾರ ಅಥವಾ ದೀಪಾವಳಿ ವೇಳೆಗೆ ಹೊಸ ಪಕ್ಷದ ಘೋಷಣೆ ಮಾಡುತ್ತಾರೆಂದು ಮೂಲಗಳಿಂದ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಈ ಇಬ್ಬರೂ ನಾಯಕರು ಜತೆಗೇ ಭೋಜನ ಕೂಟ ನಡೆಸಲಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಚೆನ್ನೈಗೆ ಇಂದು ಆಗಮಿಸಲಿರುವ ಕೇಜ್ರಿವಾಲ್ ಕಮಲ್ ಹಾಸನ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಈ ಮೊದಲು ಕಮಲ್ ಹಾಸನ್ ಎಡರಂಗದ ನಾಯಕರನ್ನೂ ಭೇಟಿಯಾಗಿದ್ದರು.  ಆಡಳಿತಾರೂಢ ಎಐಎಡಿಎಂಕೆ ಪಕ್ಷದ ವಿರೋಧಿಯಾಗಿರುವ ಕಮಲ್ ಹಾಸನ್ ರಾಜಕೀಯ ಎಂಟ್ರಿಗೆ ಈ ಮೂಲಕ ಭರ್ಜರಿ ತಯಾರಿ ನಡೆಸುತ್ತಿರುವುದು ಪಕ್ಕಾ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಪಾಕ್ ಪ್ರಧಾನಿ ಬೆದರಿಕೆ