Publish Date: Sun, 17 Dec 2017 (19:11 IST)
Updated Date: Sun, 17 Dec 2017 (19:15 IST)
ಪಾಕಿಸ್ತಾನದ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದ ದಿನದ ಅಂಗವಾಗಿ ತಿಥಿ ಆಚರಣೆ ಮಾಡುವವರನ್ನು ಗುಂಡಿಕ್ಕಿ ಸಾಯಿಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ದೇಶದ ರಕ್ಷಣೆಯೇ ನಮ್ಮ ಆದ್ಯತೆ ಎಂಬ ವಿಷಯದ ಬಗ್ಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 26/11 ಮುಂಬೈ ದಾಳಿ ಪ್ರಕರಣದ ಅಪರಾಧಿಯಾಗಿರುವ ಕಸಬ್ ಮುಗ್ದ ಜನರನ್ನು ಹತ್ಯೆಗೈದಿದ್ದಾನೆ. ಆದರೆ, ಶಿಕ್ಷೆ ನೀಡಲು ವರ್ಷಗಳು ಕಳೆದವು. ಆದ್ದರಿಂದ ದೇಶದ್ರೋಹ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಆರಂಭಿಸಬೇಕು ಎಂದು ತಿಳಿಸಿದ್ದಾರೆ.
ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿರುವವನ್ನು ತಕ್ಷಣವೇ ಶಿಕ್ಷಿಸಬೇಕು. ಇಂತಹ ವಿಶ್ವಾಸಘಾತುಕ ಉಗ್ರರ ಬಗ್ಗೆ ಅನುಕಂಪ ಇಟ್ಟುಕೊಳ್ಳಬಾರದು ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.