Select Your Language

Notifications

webdunia
webdunia
webdunia
webdunia

ಡಿಎಮ್‌ಕೆ ಮುಖ್ಯಸ್ಥರು ಯಾರು?: ಜಯಲಲಿತಾ

Karunanidhi
ಚೆನ್ನೈ , ಶುಕ್ರವಾರ, 24 ಜೂನ್ 2016 (16:44 IST)
ತನ್ನ ಪ್ರಮುಖ ರಾಜಕೀಯ ಶತ್ರು ಪಕ್ಷವಾದ ಡಿಎಂಕೆ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಕರುಣಾನಿಧಿ ಅಥವಾ ಸ್ಟಾಲಿನ್ - ಇವರಿಬ್ಬರಲ್ಲಿ ಯಾರು ಪಕ್ಷದ ಮುಖ್ಯಸ್ಥರು ಎಂಬುದು ನನಗರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ. 

 
ವಿಧಾನಸಭೆಯಲ್ಲಿ ಮಾತನ್ನಾಡುತ್ತಿದ್ದ ಜಯಾ, ಡಿಎಂಕೆ ಪ್ರಶ್ನೆಗಳಿಗೆ ಉತ್ತರಿಸಬೇಕೆಂದರೆ ಅವರ ನಾಯಕ ಯಾರು ಎಂಬ ದೊಡ್ಡ ಗೊಂದಲ ಎದುರಾಗಿದೆ. ಪಕ್ಷದ ಅಧ್ಯಕ್ಷರೆಂದು ಕರೆಸಿಕೊಳ್ಳುವ ಕರುಣಾನಿಧಿ ಅವರನ್ನು ಪಕ್ಷದ ನಾಯಕರೆಂದು ತಿಳಿಯುವುದೇ? ಅಥವಾ ವಿರೋಧ ಪಕ್ಷದ ನಾಯಕರಾಗಿ ಇಲ್ಲಿ ಕುಳಿತಿರುವ ಸ್ಟಾಲಿನ್ ಅವರನ್ನೇ? ಎಂದು ಪ್ರಶ್ನಿಸಿದ್ದಾರೆ.
 
ಕಚತೀವು ವಿವಾದಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರು ಜೂನ್ 20 ರಂದು ಜಯಲಲಿತಾ ಭಾಷಣ ಮಾಡಿದ್ದ ಮರುದಿನ ಕರುಣಾನಿಧಿ ಹೇಳಿಕೆಯೊಂದನ್ನು ನೀಡಿದ್ದರು. ಆ ಹೇಳಿಕೆಯನ್ನು ಉಲ್ಲೇಖಿಸಿ ಮಾತನ್ನಾಡುತ್ತಿದ್ದ ಸಿಎಂ, ನಿಮ್ಮ ನಾಯಕರು ಯಾರೆಂದು ಉತ್ತರಿಸಿ ಅಥವಾ ಅವರನ್ನು ವಿಧಾನಸಭೆಗೆ ಕರೆ ತರುವುದಿದ್ದರೆ ಕರೆ ತನ್ನಿ. ನಿಮ್ಮ ನಾಯಕರು ಯಾರೆಂಬುದು ನನಗೆ ಗೊಂದಲವನ್ನು ಸೃಷ್ಟಿಸಿದೆ. ಹಾಗಿದ್ದಾಗ ನಾನು ನಿಮ್ಮ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಏಪ್ರಿಲ್ ತಿಂಗಳಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಸೇರ್ಪಡೆಗೊಳಿಸಿದ ಬಿಎಸ್‌ಎನ್‌ಎಲ್