ನಿಮ್ಮವರು ಯಾರಾದದರೂ ಕುಂಭಮೇಳದಲ್ಲಿ ಸಿಲುಕಿದ್ದಾರಾ, ಕರ್ನಾಟಕ ಸರ್ಕಾರದ ಸಹಾಯವಾಣಿ ಗಮನಿಸಿ

Krishnaveni K
ಗುರುವಾರ, 30 ಜನವರಿ 2025 (09:46 IST)
ಪ್ರಯಗ್ ರಾಜ್: ಮಹಾಕುಂಭಮೇಳದಲ್ಲಿ ನಿನ್ನೆ ನಡೆದ ಕಾಲ್ತುಳಿತದಿಂದಾಗಿ ಕರ್ನಾಟಕದ ನಾಲ್ವರು ಸಾವನ್ನಪ್ಪಿದ್ದರು. ಕುಂಭಮೇಳದಲ್ಲಿ ನಿಮ್ಮವರು ಯಾರಾದರೂ ಸಿಲುಕಿದ್ದರೆ ಅವರಿಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿಯೊಂದನ್ನು ತೆರೆದಿದೆ.

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಮೌನಿ ಅವಮಾಸ್ಯೆಯ ಸಂದರ್ಭದಲ್ಲಿ ಸಾಕಷ್ಟು ಮಂದಿ ಸೇರಿದ್ದರು. ಈ ಸಂದರ್ಭದಲ್ಲಿ ನೂಕುನುಗ್ಗಲಿನಿಂದಾಗಿ ಕಾಲ್ತುಳಿತವಾಗಿದ್ದು 30 ಭಕ್ತರು ಸಾವನ್ನಪ್ಪಿದ್ದರು. ಹಲವರು ಕುಟುಂಬದವರಿಂದ ಬೇರ್ಪಟ್ಟಿದ್ದಾರೆ.

ಹೀಗಾಗಿ ಈಗ ಕರ್ನಾಟಕ ಸರ್ಕಾರ ನಮ್ಮ ರಾಜ್ಯದ ಪ್ರವಾಸಿಗರ ಸಹಾಯಕ್ಕೆ ಧಾವಿಸಿದೆ. ಕರ್ನಾಟಕದಿಂದ ತೆರಳಿದ ಭಕ್ತರು ಯಾರಾದರೂ ಕುಟುಂಬದವರ ಸಂಪರ್ಕಕ್ಕೆ ಸಿಗದೇ ಹೋಗಿದ್ದರೆ, ಕುಟುಂಬದವರಿಂದ ಬೇರ್ಪಟ್ಟಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದಾಗಿದೆ.

080-22340616 ಎಂಬ ಸಹಾಯವಾಣಿಯನ್ನು ತೆರೆಯಲಾಗಿದ್ದು, ಈ ಮೂಲಕ ನಿಮ್ಮವರನ್ನು ಪತ್ತೆ ಮಾಡಲು ಸಹಾಯ ಪಡೆಯಬಹುದಾಗಿದೆ. ಕುಂಭಮೇಳದಲ್ಲಿ ದುರಂತಕ್ಕೀಡಾದವರ ಮತ್ತು ಸಂಕಷ್ಟಕ್ಕೀಡಾದವರಿಗೆ ಸರ್ಕಾರ ನೆರವು ನೀಡಲಿದೆ ಎಂದು ನಿನ್ನೆಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನ

ಇನ್ನೇನು ಮದುವೆಗೆ ಒಂದು ಗಂಟೆಯಿರುವಾಗ ವಧುವನ್ನೇ ಕೊಂದ ವರ, ಕಾರಣ ಕೇಳಿದ್ರೆ ಶಾಕ್

ಅಲ್ ಫಲಾಹ್‌ನಂತೆ ಎಲ್ಲ ವಿಶ್ವವಿದ್ಯಾಲಯಗಳು ತನಿಖೆಗೊಳಗಾಗಬೇಕು: ವಿನೋದ್ ಬನ್ಸಾಲ್

ಕೊಳಕು ಕಿಡ್ನಿ ನೀಡಿದ್ದೇನೆ ಎಂದಿದ್ದಾರೆ, ನನ್ನ ತಪ್ಪು ಯಾರೂ ಮಾಡಬೇಡಿ: ಲಾಲು ವಿರುದ್ಧ ಕಿಡಿಕಾರಿದ ಪುತ್ರಿ ರೋಹಿಣಿ

ಮುಂದಿನ ಸುದ್ದಿ
Show comments