ಜೈಪುರ : ಇಸ್ಲಾಂ ಮತಾಂಧರ ಕೈಯಲ್ಲಿ ಭೀಕರವಾಗಿ ಹತ್ಯೆಯಾದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರ ಪುತ್ರರಿಗೆ ಸರ್ಕಾರಿ ಕೆಲಸ ನೀಡಲು ರಾಜಸ್ಥಾನ ಕ್ಯಾಬಿನೆಟ್ ತೀರ್ಮಾನಿಸಿದೆ.
ಜೂನ್ 28ರಂದು ಇಬ್ಬರು ಭಯೋತ್ಪಾದಕರಿಂದ ಹತ್ಯೆಯಾದ ಕನ್ಹಯ್ಯ ಲಾಲ್ ತೇಲಿ ಅವರ ಪುತ್ರರಾದ ಯಶ್ ತೇಲಿ ಹಾಗೂ ತರುಣ್ ತೇಲಿ ಅವರನ್ನು ಸರ್ಕಾರಿ ಕೆಲಸಕ್ಕೆ ನೇಮಿಸಲು ಸಂಪುಟ ನಿರ್ಧರಿಸಿದೆ ಎಂದು ಗೆಹ್ಲೋಟ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈ ನೇಮಕಾತಿಯನ್ನು 2008 ಹಾಗೂ 2009ರ ರಾಜಸ್ಥಾನ ಅಧೀನ ಕಚೇರಿ ಕ್ಲರ್ಕ್ ಸೇವಾ ನಿಯಮಗಳ ಅಡಿಯಲ್ಲಿ ಮಾಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಕನ್ಹಯ್ಯ ಲಾಲ್ ತಮ್ಮ ಕುಟುಂಬದಲ್ಲಿ ತಾವೊಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮಿಬ್ಬರು ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದರು.
ಇದೀಗ ಕುಟುಂಬ ತನ್ನ ಆಸರೆಯನ್ನು ಕಳೆದುಕೊಂಡಿದ್ದು, ಸರ್ಕಾರ ಕನ್ಹಯ್ಯ ಕುಟುಂಬದ ಕಂಬನಿಗೆ ನೆರವು ನೀಡಲು ಮುಂದಾಗಿದೆ. ಕನ್ಹಯ್ಯ ಮಕ್ಕಳಿಗೆ ಸರ್ಕಾರಿ ಕೆಲಸಗಳನ್ನು ಒದಗಿಸಲು ಮುಂದಾಗುವ ಮೂಲಕ ಸಹಾಯ ಮಾಡಿದೆ.