Publish Date: Fri, 29 Dec 2023 (19:04 IST)
Updated Date: Fri, 29 Dec 2023 (20:03 IST)
ನ್ಯಾಯಾಲಯದ ಆವರಣದೊಳಗೆ ಆನೆಯೊಂದು ನುಗ್ಗಿದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಹತ್ತಿರದ ರಾಜಾಜಿ ರಕ್ಷಿತಾರಣ್ಯದಿಂದ ಹೊರಬಂದಿದೆ ಎಂದು ನಂಬಲಾದ ಆನೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯದ ಆವರಣದಲ್ಲಿ ಸಂಚರಿಸುತ್ತಿದ್ದಂತೆ ಗೊಂದಲವನ್ನು ಸೃಷ್ಟಿಸಿತು.ಇನ್ನು ಆನೆ ಗೇಟ್ ಗಳನ್ನು ಮುರಿದು ಗೋಡೆಯನ್ನು ಹಾನಿಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.