Select Your Language

Notifications

webdunia
webdunia
webdunia
Friday, 11 April 2025
webdunia

ಜೆಎನ್‌ಯು ಅತ್ಯಾಚಾರ ಪ್ರಕರಣ: ಶರಣಾದ ಅನಮೋಲ್ ರತನ್

JNU rape case
ನವದೆಹಲಿ , ಗುರುವಾರ, 25 ಆಗಸ್ಟ್ 2016 (09:03 IST)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಅನಮೋಲ್ ರತನ್ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ. 
ಬುಧವಾರ ರಾತ್ರಿ 10.15ಕ್ಕೆ ಆರೋಪಿ ಅನಮೋಲ್ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ ಎಂದು ವರದಿಯಾಗಿದೆ. 
 
ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು ಗುರುವಾರ ಪಟಿಯಾಲಾ ಹೌಸ್ ಕೋರ್ಟ್‌ಗೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 
 
ಜವಾಹರಲಾಲ್ ವಿಶ್ವವಿದ್ಯಾಲಯದ 28 ವರ್ಷದ ಸಂಶೋಧನಾ ವಿದ್ಯಾರ್ಥಿಯೋರ್ವಳು ತನ್ನ ಸೀನಿಯರ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಶನಿವಾರ ಸಂಜೆ ಈ ವಿಶ್ವವಿದ್ಯಾಲಯದ ಆವರಣದೊಳಗೆ ಈ ಘಟನೆ ನಡೆದಿತ್ತು ಎಂದು ಹೇಳಲಾಗುತ್ತಿದೆ. 
 
ಪೀಡಿತೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿರುವ ವಸಂತ ಕುಂಜ್ (ಉತ್ತರ) ಪೊಲೀಸರು ಆರೋಪಿ ವಿರುದ್ಧ 376(ಅತ್ಯಾಚಾರ) ಮಚ್ಚು 506 (ಕ್ರಿಮಿನಲ್ ಇನ್‌ಫಾರ್ಮೇಶನ್) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
 
ಪ್ರಥಮ ವರ್ಷದ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಪೀಡಿತೆ ಇತ್ತೀಚಿಗೆ, ಯಾರಾದರೂ ಮರಾಠಿ ಚಿತ್ರ ಸೈರಾಟ್ ಡಿಜಿಟಲ್ ಪ್ರತಿಯನ್ನು ಹೊಂದಿದ್ದೀರಾ? ಎಂದು ಫೇಸ್‌ಬುಕ್‌ನಲ್ಲಿ ಕೇಳಿಕೊಂಡಿದ್ದಳು. ಈ ಮೂಲಕ ಆರೋಪಿಯ ಜತೆ ಆಕೆಯ ಸಂಪರ್ಕವಾಗಿತ್ತು. 
 
ನನ್ನ ಬಳಿ ಸಿನಿಮಾದ ಡಿಜಿಟಲ್ ಪ್ರತಿ ಇದೆ ಎಂದು ಆಕೆಯನ್ನು ತನ್ನ ಹಾಸ್ಟೆಲ್‌ಗೆ ಕರೆದೊಯ್ದ ಆತ ಮತ್ತು ತರಿಸುವ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. 
 
ಆರೋಪಿ ಅಖಿಲ ಭಾರತ ವಿದ್ಯಾರ್ಥಿ ಸಂಘ(AISA)ದ ಕಾರ್ಯಕರ್ತ ಕೂಡ ಎಂದು ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಮವಸ್ತ್ರದಲ್ಲೇ ನೇಣಿಗೆ ಶರಣಾದ ಪುಟ್ಟ ಬಾಲಕಿ