Publish Date: Thu, 25 Aug 2016 (08:38 IST)
Updated Date: Thu, 25 Aug 2016 (14:42 IST)
10 ವರ್ಷದ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನೌಬಾದ್‌ನಲ್ಲಿ ನಡೆದಿದೆ. ನಿಶಾ ಪವಾರ್ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ.
ಬಾಲಕಿಯ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳಿದ್ದಾರೆ. ಅಜ್ಜ- ಅಜ್ಜಿ ಜತೆ ವಾಸವಾಗಿದ್ದ ಬಾಲಕಿ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು.
ಬುಧವಾರ ಮುಂಜಾನೆ ಶಾಲೆಗೆ ಹೋಗಲು ಸಮವಸ್ತ್ರ ಧರಿಸಿಕೊಂಡ ಬಾಲಕಿ ಏಕಾಏಕಿ ಕೋಣೆಗೆ ತೆರಳಿ ಶಾಲಿನಿಂದ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಾಳೆ.
ಸಾವೆಂದರೇನು ಎಂದು ಅರಿಯದ ಪುಟ್ಟ ಮಗು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳೀಯರನ್ನು ದಂಗು ಬಡಿಸಿದ್ದು, ಆಕೆಯ ಈ ದುಡುಕಿನ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.