Select Your Language

Notifications

webdunia
webdunia
webdunia
webdunia

'ಅಮ್ಮ'ನ ಸಾವಿಗೆ ಶಾಕ್ ಆಗಿ ಸತ್ತವರು 470 ಜನರಂತೆ!

'ಅಮ್ಮ'ನ ಸಾವಿಗೆ ಶಾಕ್ ಆಗಿ ಸತ್ತವರು 470 ಜನರಂತೆ!
ಚೆನ್ನೈ , ಸೋಮವಾರ, 12 ಡಿಸೆಂಬರ್ 2016 (09:51 IST)
ತಮಿಳುನಾಡಿನ ಜನರ ಪಾಲಿಗೆ " ಅಮ್ಮ"ನೆನಿಸಿಕೊಂಡಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದಿಂದ ಆಘಾತಗೊಂಡು ಒಟ್ಟು 470 ಜನರು ಸತ್ತಿದ್ದಾರೆ ಎಂದು ಎಐಡಿಎಂಕೆ ತಿಳಿಸಿದೆ. 

ಜಯಾ ಡಿಸೆಂಬರ್ 5 ರಂದು ಮೃತಪಟ್ಟ ಸುದ್ದಿ ಕೇಳಿ ಮೃತರಾದವರ ಕುಟುಂಬಗಳಿಗೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಆಡಳಿತ ಪಕ್ಷ ಘೋಷಿಸಿದೆ. 
 
ಪ್ರಸ್ತುತ ಸಾವನ್ನಪ್ಪಿದ್ದ 190 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದವರು 6 ಮಂದಿ. ಇವರ ಚಿಕಿತ್ಸೆ ಖರ್ಚಿಗೆ ತಲಾ 50ಸಾವಿರವನ್ನು ಘೋಷಿಸಲಾಗಿದೆ. 
 
ಸೆಪ್ಟೆಂಬರ್ 23 ರಂದು ಜ್ವರ ಮತ್ತು ನೀರ್ಜಲೀಕರಣ ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಜೆ. ಜಯಲಲಿತಾ ಅವರಿಗೆ ಡಿಸೆಂಬರ್ 4 ರಂದು ಹೃದಯಾಘಾತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಡಿಸೆಂಬರ್ 5 ರಂದು ಸಾವನ್ನಪ್ಪಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರದ ಇನ್ನೊಬ್ಬ ಸಚಿವರ ರಾಸಲೀಲೆ ಪ್ರಕರಣ