Publish Date: Sun, 11 Dec 2016 (14:29 IST)
Updated Date: Sun, 11 Dec 2016 (14:33 IST)
ಬೆಂಗಳೂರು: ಸಚಿವ ತನ್ವೀರ್ ಸೇಠ್ ಪ್ರಕರಣ ಮಾಸುವ ಮೊದಲೇ ರಾಜ್ಯ ಸರ್ಕಾರದ ಇನ್ನೊಬ್ಬ ಸಚಿವ ಎಚ್ ವೈ ಮೇಟಿ ಅವರ ರಾಸಲೀಲೆ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಬಳಿ ವರ್ಗಾವಣೆ ವಿಚಾರವಾಗಿ ಮಾತನಾಡಲು ಬಂದ ಮಹಿಳೆಯ ಮೇಲೆ ಸಚಿವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಇದರ ಸಿಡಿ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಬಳಿಯಿದ್ದು, ಅದನ್ನು ಬಿಡುಗಡೆ ಮಾಡದಂತೆ ಕಾರ್ಯಕರ್ತರಿಗೆ ಮೇಟಿ ಬೆಂಬಲಿಗರು ಬೆದರಿಕೆ ಹಾಕಿದ್ದಾರೆನ್ನಲಾಗಿದೆ.
ಆದರೆ ಇದನ್ನು ಸಚಿವರು ಅಲ್ಲಗಳೆದಿದ್ದು, ನನ್ನ ಬಳಿ ಬೆದರಿಕೆ ಹಾಕುವಂತಹ ಆಪ್ತರು ಯಾರೂ ಇಲ್ಲ. ಇದೆಲ್ಲಾ ನನ್ನ ಹೆಸರಿಗೆ ಮಸಿ ಬಳೆಯಲು ಮಾಡಿದ ತಂತ್ರ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಶಕ್ತಿ ಸೌಧದಲ್ಲೇ ಈ ಸೆಕ್ಸ್ ಸ್ಕ್ಯಾಂಡಲ್ ನಡೆದಿದೆ ಎನ್ನಲಾಗಿದ್ದು, ಸರ್ಕಾರಕ್ಕೆ ನಾಚಿಕೆಗೇಡಿನ ವಿಷಯವವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ