Select Your Language

Notifications

webdunia
webdunia
webdunia
webdunia

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಹಿಲೆರಿ ಸ್ಪರ್ಧಿಸಲು ಜಯಲಲಿತಾ ಕಾರಣವಂತೆ..!

ಜೆ.ಜಯಲಲಿತಾ
ಚೆನ್ನೈ , ಮಂಗಳವಾರ, 2 ಆಗಸ್ಟ್ 2016 (19:52 IST)
ಒಂದು ವೇಳೆ ಅಮೆರಿಕ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದರೆ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸಬೇಕಾಗಿರುವುದು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರಿಗೆ ಎಂದು ಎಐಎಡಿಎಂಕೆ ಶಾಸಕ ಹೇಳಿದ್ದಾರೆ. 
ಕಣ್ಣೂರು ವಿಧಾನಸಭಾ ಕ್ಷೇತ್ರದ ಎಐಎಡಿಎಂಕೆ ಶಾಸಕ ಎ.ರಾಮು ಪ್ರಕಾರ, ಸಿಎಂ ಜಯಲಲಿತಾ ಅವರಿಂದ ಸ್ಪೂರ್ತಿಗೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಲೆರಿ ಕ್ಲಿಂಟನ್ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. 
 
ಕಳೆದ 2011ರ ಜುಲೈ ತಿಂಗಳಲ್ಲಿ ಹಿಲೆರಿ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾಗ, ಜಯಲಲಿತಾ ಅವರನ್ನು ಭಾರತದಲ್ಲಿ ಭೇಟಿ ಮಾಡಿದ ನಂತರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವ ಆಕಾಂಕ್ಷೆ ಬೆಳೆಯಿತು ಎಂದು ಹೇಳಿದ್ದಾರೆ.  
 
ಸಂಪೂರ್ಣ ವಿಶ್ವವೇ ಜಯಲಲಿತಾ ಮತ್ತು ಹಿಲೆರಿ ಮಹತ್ವದ ಭೇಟಿಯನ್ನು ಕೊಂಡಾಡುತ್ತಿದೆ. ಅಮ್ಮ ಜಯಲಲಿತಾ ಅವರ ದಕ್ಷತೆ ಸಾಮರ್ಥ್ಯವನ್ನು ಕಂಡು ಸ್ಪೂರ್ತಿಗೊಂಡಿದ್ದಲ್ಲದೇ ಅಮ್ಮಾ ಅವರ ಸಲಹೆಗಳಿಗೆ ಗೌರವ ಕೊಟ್ಟು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದಕ್ಕೆ ಮೂಲ ಕಾರಣ ಅಮ್ಮಾ ಎಂದು ಹೊಗಳಿದ್ದಾರೆ.  
 
ವಿಧಾನಸಭೆಯ ಹೊರಗೂ ಅವರನ್ನು ಸಮರ್ಥಿಸಿಕೊಂಡ ಶಾಸಕ ರಾಮು, ಹಿಲೆರಿ ಕ್ಲಿಂಟನ್ ಅಮ್ಮಾ ಅವರನ್ನು ಭೇಟಿಯಾದ ನಂತರ ಅವರ ನಾಯಕತ್ವ ಗುಣ ಮತ್ತು ಸಾಧನೆಗಳ ಕಂಡಿರುವುದು ಹಿಲೆರಿಗೆ ಪ್ರೇರಣೆಯಾಯಿತು. ಅಮ್ಮಾ ಭೇಟಿಯ ನಂತರವೇ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಹಿಲೆರಿ ಕೈಗೊಂಡರು ಎಂದು ತಿಳಿಸಿದ್ದಾರೆ. 
 
ಕಳೆದ 2014 ರಲ್ಲಿ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡ ಶಾಸಕ ರಾಮು ಅವರ ರಾಜಕೀಯ ವಿರೋಧಿಗಳ ಪ್ರಕಾರ, ಜಯಲಲಿತಾ ಅವರನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರೈತರ ಮೇಲೆ ಲಾಠಿ ಬೀಸಿದ ಯಾವ ಸರಕಾರವು ಉಳಿದಿಲ್ಲ: ಶಾಸಕ ಕೋನರೆಡ್ಡಿ