Select Your Language

Notifications

webdunia
webdunia
webdunia
webdunia

ರೈತರ ಮೇಲೆ ಲಾಠಿ ಬೀಸಿದ ಯಾವ ಸರಕಾರವು ಉಳಿದಿಲ್ಲ: ಶಾಸಕ ಕೋನರೆಡ್ಡಿ

ರೈತರ ಮೇಲೆ ಲಾಠಿ ಬೀಸಿದ ಯಾವ ಸರಕಾರವು ಉಳಿದಿಲ್ಲ: ಶಾಸಕ ಕೋನರೆಡ್ಡಿ
ಚಿತ್ರದುರ್ಗ , ಮಂಗಳವಾರ, 2 ಆಗಸ್ಟ್ 2016 (19:02 IST)
ಯಮನೂರು ಲಾಠಿ ಚಾರ್ಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರ ಮೇಲೆ ಲಾಠಿ ಬೀಸಿದ ಯಾವ ಸರಕಾರವು ಉಳಿದಿಲ್ಲ ಎಂದು ನವಲಗುಂದ ಜೆಡಿಎಸ್ ಶಾಸಕ ಎನ್‌.ಎಚ್‌.ಕೋನರೆಡ್ಡಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಮಹದಾಯಿ ಹೋರಾಟದಲ್ಲಿ ಬಂಧನಕ್ಕೊಳಗಾದ ರೈತರನ್ನು ಚಿತ್ರದುರ್ಗ ಕಾರಾಗೃಹದಲ್ಲಿ ಇಡಲಾಗಿದ್ದು, ಇಂದು ಜೆಡಿಎಸ್ ಶಾಸಕ ಕೋನರೆಡ್ಡಿ ರೈತರನ್ನು ಭೇಟಿಯಾಗಿ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸಿದರು.
 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಯಮನೂರಿನಲ್ಲಿ ರೈತರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆದ ಲಾಠಿ ಚಾರ್ಚ್‌ ಅಮಾನವೀಯವಾದದ್ದು, ರೈತರ ಮೇಲೆ ಲಾಠಿ ಬೀಸಿದ ಯಾವ ಸರಕಾರವು ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ನನ್ನ ಕ್ಷೇತ್ರದಲ್ಲಿ ರೈತರ ಮೇಲೆ ದೌರ್ಜನ್ಯ ನಡೆದಿರುವುದು ನನಗೆ ಮಾಹಿತಿ ಇರಲಿಲ್ಲ. ಪೊಲೀಸರಿಗೆ ಲಾಠಿ ಚಾರ್ಚ್ ನಡೆಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು.
 
ಘಟನೆ ನಡೆದ ಸ್ಥಳಕ್ಕೆ ಯಾವ ಸಚಿವರು ಸೌಜನ್ಯಕ್ಕಾಗಿಯೂ ಭೇಟಿ ನೀಡಿಲ್ಲ. ಮಹದಾಯಿ ಹೋರಾಟದಲ್ಲಿ ಪಕ್ಷಭೇದ ಮರೆತು ಚರ್ಚೆ ನಡೆಸಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಸಮಸ್ಯಯನ್ನು ಇತ್ಯರ್ಥಗೊಳಿಸಬೇಕು ಎಂದು ಜೆಡಿಎಸ್ ಶಾಸಕ ಎನ್‌.ಎಚ್‌.ಕೋನರೆಡ್ಡಿ ಮನವಿ ಮಾಡಿದ್ದಾರೆ.
 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಾಪದ ನಡುವಳಿಗಳಲ್ಲಿ ಬದಲಾವಣೆಗೆ ಚಿಂತನೆ: ಕೋಳಿವಾಡ್