Publish Date: Thu, 02 Mar 2017 (20:48 IST)
Updated Date: Thu, 02 Mar 2017 (20:54 IST)
ಸೆಪ್ಟೆಂಬರ್ 22ರಂದು ಜಯಲಲಿತಾ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ಯಾರೋ ಅವರನ್ನ ನೂಕಿದ್ದರು ಎಂದು ತಮಿಳುನಾಡಿನ ಮಾಜಿ ಸ್ಪೀಕರ್ ಪಿ.ಎಚ್. ಪಾಂಡಿಯನ್ ಆರೋಪಿಸಿದ್ದಾರೆ.
`ಯಾರೋ ಒಬ್ಬರು ಅಮ್ಮನನ್ನ ನೂಕಿದ್ದರಿಂದ ಅಮ್ಮ ಕೆಳಗೆ ಬಿದ್ದಿದ್ದರು. ಆ ಬಳಿಕ ಯಾರೊಬ್ಬರೂ ಏನಾಯಿತೆಂದು ಅಮ್ಮನ ಕಡೆ ನೋಡಲಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಆಂಬ್ಯುಲೆನ್ಸ್ ಕರೆದು ಆಸ್ಪತ್ರೆಗೆ ದಾಖಲಿಸಿದರು ಎಂದು ಪಾಂಡಿಯನ್’ ಹೇಳಿದ್ದಾರೆ.
ಅಮ್ಮ ಆಸ್ಪತ್ರೆಗೆ ದಾಖಲಾದ ಬಳಿಕ ಅಲ್ಲಿದ್ದ 27 ಸಿಸಿಟಿವಿಗಳನ್ನೂ ತೆಗೆದುಹಾಕಲಾಯಿತು. ಸಿಸಿಟಿವಿಗಳನ್ನ ತೆಗೆದುಹಾಕಿದ್ದು ಯಾವ ಕಾರಣಕ್ಕೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕೆಂದು ಪಾಂಡಿಯನ್ ಒತ್ತಾಯಿಸಿದ್ದಾರೆ.
ಜಯಲಲಿತಾಗೆ ಚಿಕಿತ್ಸೆ ಸ್ಥಗಿತಗೊಳಿಸುವಂತೆ ಆದೇಶ ನೀಡಿದವರ್ಯಾರು ಎಂಬ ಬಗ್ಗೆ ನಮಗೆ ತಿಳಿಯಬೇಕಿದೆ. ಈ ಬಗ್ಗೆ
ನಾನೇ ಆಂತರಿಕ ತನಿಖೆ ನಡೆಸುತ್ತಿದ್ದೇನೆ ಎಂದು ಪಾಂಡಿಯನ್ ಹೇಳಿದ್ದಾರೆ.