Publish Date: Sat, 08 Jan 2022 (10:18 IST)
Updated Date: Sat, 08 Jan 2022 (10:36 IST)
ನವದೆಹಲಿ: ತಿಹಾರ್ ಜೈಲಿನಲ್ಲಿ ವಿಚಾರಾಧೀನ ಖೈದಿಯೊಬ್ಬ ಪೊಲೀಸರ ಭಯದಿಂದ ಮೊಬೈಲ್ ನುಂಗಿ ಈಗ ಆಸ್ಪತ್ರೆ ಸೇರಿದ್ದಾನೆ.
ಖೈದಿ ಮೇಲೆ ಅನುಮಾನಗೊಂಡ ಪೊಲೀಸರು ಆತನಿದ್ದ ಕೊಠಡಿಗೆ ಹುಡುಕಾಟಕ್ಕೆ ಬಂದಿದ್ದರು. ಈ ವೇಳೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದ ಮೊಬೈಲ್ ನ್ನು ನುಂಗಿದ್ದಾನೆ.
ತಕ್ಷಣವೇ ಆತನನ್ನು ದೀನದಯಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಆತ ಪ್ರಾಣಾಪಾಯದಿಂದ ಹೊರಬಂದಿದ್ದು, ಆರೋಗ್ಯವಾಗಿದ್ದಾನೆ ಎಂದು ತಿಳಿದುಬಂದಿದೆ.