Select Your Language

Notifications

webdunia
webdunia
webdunia
webdunia

ಭಾರತೀಯ ಸೇನೆಯನ್ನು ಕಳುಹಿಸಿದ್ದು ಮೋದಿ ರಾಹುಲ್ ಗಾಂಧಿಯಲ್ಲ: ಜೈಶಂಕರ್

ಭಾರತೀಯ ಸೇನೆಯನ್ನು ಕಳುಹಿಸಿದ್ದು ಮೋದಿ ರಾಹುಲ್ ಗಾಂಧಿಯಲ್ಲ: ಜೈಶಂಕರ್
ನವದೆಹಲಿ , ಬುಧವಾರ, 22 ಫೆಬ್ರವರಿ 2023 (12:27 IST)
ನವದೆಹಲಿ : ನಾವು ಚೀನಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆರೋಪಿಸುತ್ತಿದ್ದಾರೆ. ಭಾರತೀಯ ಸೇನೆಯನ್ನು ಎಲ್ಎಸಿಗೆ ಕಳುಹಿಸಿದ್ದು ಯಾರು? ರಾಹುಲ್ ಗಾಂಧಿಯಲ್ಲ, ನರೇಂದ್ರ ಮೋದಿ ಸೇನೆಯನ್ನು ಕಳುಹಿಸಿದ್ದಾರೆ ಎಂದು ಜೈಶಂಕರ್ ಟಾಂಗ್ ಕೊಟ್ಟಿದ್ದಾರೆ.

ನಮ್ಮ ಸರ್ಕಾರದಲ್ಲಿ ಗಡಿಯಲ್ಲಿನ ಮೂಲಸೌಕರ್ಯ ವೆಚ್ಚವನ್ನು ಐದು ಬಾರಿ ಹೆಚ್ಚಿಸಿದ್ದೇವೆ. ಈಗ ಹೇಳಿ, ರಕ್ಷಣಾತ್ಮಕ ಮತ್ತು ಹೊಂದಾಣಿಕೆಯ ವ್ಯಕ್ತಿ ಯಾರು? ನಿಜವಾಗಿ ಯಾರು ಸತ್ಯವನ್ನು ಹೇಳುತ್ತಿದ್ದಾರೆ? ಯಾರು ವಿಷಯಗಳನ್ನು ನಿಖರವಾಗಿ ವ್ಯಕ್ತಪಡಿಸುತ್ತಿದ್ದಾರೆ? ಯಾರು ಇತಿಹಾಸದೊಂದಿಗೆ ಕಾಲೆಳೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಜೈಶಂಕರ್ ಹರಿಹಾಯ್ದಿದ್ದಾರೆ. 

ಕಳೆದ ವರ್ಷ ಪ್ಯಾಂಗೊಂಗ್ ಲೇಕ್ ಪ್ರದೇಶದಲ್ಲಿ ಸೇತುವೆ ನಿರ್ಮಿಸಿರುವ ಚೀನಾ ವಿಚಾರವಾಗಿ ಕೇಂದ್ರವನ್ನು ಗುರಿಯಾಗಿಸಿ ಟೀಕಿಸಿದ್ದ ವಿಪಕ್ಷಗಳನ್ನು ಜೈಶಂಕರ್ ತರಾಟೆಗೆ ತೆಗೆದುಕೊಂಡರು. 1962 ರ ಯುದ್ಧದ ನಂತರ ಈ ಪ್ರದೇಶವು ಚೀನಾ ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಗರಾಜು ಜೊತೆ ರೂಪಾ ಮಾತಾಡಿರೋ ಆಡಿಯೋ ಲೀಕ್