Publish Date: Sat, 27 Apr 2019 (15:22 IST)
Updated Date: Sat, 27 Apr 2019 (15:23 IST)
ಶ್ರೀಲಂಕಾ ಸರಣಿ ಬಾಂಬ್ ಸ್ಪೋಟದ ಬಳಿಕ ಉಗ್ರರು ನಮ್ಮ ರಾಜ್ಯದಲ್ಲೂ ಓಡಾಡುತ್ತಿದ್ದಾರೆಯೇ ಇಂತಹದ್ದೊಂದು ಅನುಮಾನ ಈಗ ವ್ಯಕ್ತವಾಗತೊಡಗಿದೆ.
ಇದಕ್ಕೆ ಇಂಬು ನೀಡುವಂತೆ ರಾಜ್ಯ ಸರ್ಕಾರಕ್ಕೆತಮಿಳುನಾಡು ಸರ್ಕಾರದಿಂದ ಎಚ್ಚರಿಕೆಯ ಸಂದೇಶ ಬಂದಿದೆ. ಕರ್ನಾಟಕ, ಕೇರಳ, ತಮಿಳುನಾಡು, ಪಾಂಡಿಚೇರಿ, ಗೋವಾ, ಮಹಾರಾಷ್ಟ್ರ ರಾಜ್ಯಗಳಿಗೆ ಐಸಿಸ್ ಉಗ್ರರು ಎಂಟ್ರಿ ನೀಡಿರುವ ಕುರಿತು ಉಲ್ಲೇಖವಾಗಿದೆ ಎನ್ನಲಾಗಿದೆ.
ತಮಿಳುನಾಡಿನ ರಾಮನಾಥಪುರಗೆ 19 ಜನ ಉಗ್ರರು ಬಂದಿಳಿದಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತ್ಮಾಹುತಿ ದಾಳಿ ನಡೆಸುವ ಸಾಧ್ಯತೆ ಬಗ್ಗೆ ಲಾರಿ ಚಾಲಕನೋರ್ವನಿಂದ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆಯಂತೆ.
ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸುವಂತೆ ತಮಿಳುನಾಡು ಪೊಲೀಸ್ ಇಲಾಖೆಯಿಂದ ದಕ್ಷಿಣ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರಿಗೆ ಹೈ ಅಲರ್ಟ ಘೋಷಿಸುವಂತೆ ಎಚ್ಚರಿಕೆ ಸಂದೇಶ ರವಾನೆ ಆಗಿದೆಯಂತೆ.