Select Your Language

Notifications

webdunia
webdunia
webdunia
Saturday, 12 April 2025
webdunia

ಐಸಿಸ್ ಉಗ್ರರಿಗಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನು ವೇಶ್ಯಾವಾಟಿಕೆಗೆ ನೂಕಲು ಮತಾಂತರ

ಮತಾಂತರ
ತಿರುವನಂತಪುರ , ಶನಿವಾರ, 13 ಜನವರಿ 2018 (08:45 IST)

ಪ್ರೀತಿಸಿ ಮದವೆಯಾದ ಯುವತಿಯನ್ನು ಐಸಿಸ್ ಉಗ್ರರಿಗಾಗಿ ವೇಶ್ಯಾವಾಟಿಕೆಗೆ ನೂಕಲು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಘಟನೆ ವರದಿಯಾಗಿದೆ.

ಸಿರಿಯಾದ ಐಸಿಸ್ ಉಗ್ರರ ಲೈಂಗಿಕ ತೃಷೆ ತೀರಿಸುವ ಸಲುವಾಗಿ ಕೇರಳದ ಎರ್ನಾಕುಲಂ ಮೂಲದ ಮಹಿಳೆಯನ್ನು ಪತಿ 26ವರ್ಷದ ಮಹ್ಮದ್ ರಿಯಾಜ್ ಪತ್ನಿಯನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಮಹಿಳೆಯನ್ನು ಮತಾಂತರ ಕೂಡ ಮಾಡಿದ್ದಾನೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರೀತಿಸಿಕೊಂಡು ಮದುವೆಯಾಗಿದ್ದರು. ನಂತರ ಸೌದಿ ಅರೆಬಿಯಾಕ್ಕೆ ಪತ್ನಿಯನ್ನು ಕರೆದುಕೊಂಡು ಹೋದ ಪತಿ ಆಕೆಗೆ ಚಿತ್ರಹಿಂಸೆ ನೀಡಿ, ಮನೆಯೊಂದರಲ್ಲಿ ಕೂಡಿ ಹಾಕಿದ್ದ. ಮೊಬೈಲ್ ಹಾಗೂ ಇಮೇಲ್ ಮೂಲಕ ತನ್ನ ತಂದೆಯನ್ನು ಸಂಪರ್ಕಿಸಿದ್ದಾಳೆ ಎಂದು ವರದಿಯಾಗಿದೆ.

ಅನಿವಾಸಿ ಭಾರತೀಯರೊಬ್ಬರ ಮೂಲಕ ಕೇರಳಕ್ಕೆ ಬಂದಿರುವ ಮಹಿಳೆಯ ದೂರಿನ ಮೇರೆಗೆ ಫವಾಜ್ ಜಮಾಲ್ ಹಾಗೂ ಮೊಹ್ಮದ್ ಸಿಯಾದ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ವಿಚ್ಚೇನಕ್ಕೂ ಅರ್ಜಿ ಸಲ್ಲಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂ ದುರ್ಬಳಕೆಯ ಅನುಮಾನ ವ್ಯಕ್ತಪಡಿಸಿದ ಜೆಡಿಎಸ್