ಬೆಂಗಳೂರು: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಇತ್ತೀಚೆಗೆ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ, ತ್ರಿವೇಣಿಯಲ್ಲಿ ಪವಿತ್ರ ಸ್ನಾನ ಮಾಡಿದರು.
ಇಶಾ ಅಲ್ಲಿ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಅವರ ಪತಿ ಆನಂದ್ ಪಿರಮಾಲ್ ಜೊತೆಗಿದ್ದರು. ದಂಪತಿಗಳು ಹೆಲಿಕಾಪ್ಟರ್‌ನಲ್ಲಿ ಮಹಾಕುಂಭ ಸ್ಥಳವನ್ನು ತಲುಪಿದರು ಮತ್ತು ಶೀಘ್ರದಲ್ಲೇ ಹೆಲಿಪ್ಯಾಡ್‌ನಿಂದ ಪವಿತ್ರ ಸ್ಥಳಕ್ಕೆ ತೆರಳಿದರು.
ಮುಖೇಶ್ ಅಂಬಾನಿ ಅವರ ಕುಟುಂಬ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಈಚೆಗೆ ಪಾಲ್ಗೊಂಡರು.ಇದೀಗ ಶಿವರಾತ್ರಿ ವಿಶೇಷ ದಿನದಂದು ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ದಂಪತಿ ಸಮೇತರಾಗಿ ಪಾಲ್ಗೊಂಡಿದ್ದಾರೆ.