Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕಿ ಮಧ್ಯೆ ಟ್ವಿಟ್ಟರ್ ಸಮರ

ಪ್ರಿ.ಯಾಂಕಾ ಚತುರ್ವೇದಿ
ನವದೆಹಲಿ , ಸೋಮವಾರ, 23 ಮೇ 2016 (20:14 IST)
ಆಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿರುವ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಮರು ಟ್ವಿಟ್ ಮಾಡಿದ ನಂತರ ಉಭಯರ ನಡುವೆ ಟ್ವೀಟ್ ಸಮರವೇ ನಡೆದಿದೆ.
 
ಸಚಿವೆ ಸ್ಮತಿ ಇರಾನಿಗೆ ಜೀವ ಬೆದರಿಕೆಯಿದೆ ಎಂದು ಝಡ್‌ ಭದ್ರತೆ ನೀಡಲಾಗಿದೆ. ಆದರೆ, ನಾನು ರೇಪ್‌ಗೊಳಗಾಗುವ ಮತ್ತು ಜೀವಬೆದರಿಕೆ ಕರೆಗಳ ಮಧ್ಯೆ ಹೋರಾಟ ನಡೆಸುತ್ತಿದ್ದೇನೆ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
 
ನನಗೆ ಝಡ್‌ ಶ್ರೇಣಿಯ ಭದ್ರತೆ ನೀಡಲಾಗಿಲ್ಲ. ಮುಂದಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮರು ಪೋಸ್ಟ್ ಟ್ವೀಟ್ ಮಾಡಿದ್ದಾರೆ ಇರಾನಿ ಟ್ವೀಟ್‌ಗೆ ಮಾರುತ್ತರವಾಗಿ, ನನಗೆ ಗೃಹ ಸಚಿವಾಲಯದ ಅಂತರಿಕ ಕಾರ್ಯನಿರ್ವಹಣೆ ಬಗ್ಗೆ ಗೊತ್ತಿಲ್ಲ. ಮಾಧ್ಯಮಗಳಿಂದ ಗೊತ್ತಾಗಿದ್ದರಿಂದ ಹಾಗೇ ಕೇಳಿದ್ದೇನೆ ಎಂದಿದ್ದಾರೆ. 
 
ಸ್ಮೃತಿ ಇರಾನಿಯವರೇ ಹಾಗಾದಲ್ಲಿ ನಿಮಗೆ ಯಾವುದೇ ಭದ್ರತೆ ಇಲ್ಲವೇ ಎಂದು ಚತುರ್ವೇದಿ ಮರು ಟ್ವೀಟ್ ಮಾಡಿದ್ದಾರೆ. ಇದರಿಂದ ಕೆಂಡಾಮಂಡಲಾದ ಸಚಿವ ಇರಾನಿ, ನನ್ನ ಭದ್ರತೆಯ ಯಾಕೆ ಅಷ್ಟೊಂದು ಆಸಕ್ತಿ ತೋರಿಸುತ್ತಿದ್ದಾರಾ? ಏನಾದರೂ ಪ್ಲ್ಯಾನ್ ಹಾಕಿದ್ದೀರಾ ಎಂದು ಮರು ಟ್ವೀಟ್ ಮಾಡಿದ್ದಾರೆ.
 
ನಾನು ಆ ರೀತಿ ಹೇಳಲಿಲ್ಲ. ಆದ್ದರಿಂದ ಚಿಂತೆ ಮಾಡುವುದು ಬೇಡಿ. ಮತ್ತೊಂದು ವಿಶ್ವವಿದ್ಯಾಲಯದಲ್ಲಿ ಕೋಲಾಹಲ ಸೃಷ್ಟಿಸಿ ಎಂದು ಲೇವಡಿ ಮಾಡಿ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
 
ಆಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿರುವುದು ರಾಹುಲ್ ಹಣೆಬರಹ, ಶುಭವಾಗಲಿ ಎಂದು ಸ್ಮತಿ ಟ್ವಿಟ್ ಮಾಡಿದ್ದರೆ, ಅದಕ್ಕುತ್ತರವಾಗಿ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಸಚಿವೆಯಾಗಿ ಮೆರೆಯತ್ತಿರುವುದು ನಿಮ್ಮ ಹಣೆಬರಹ, ನಿಮಗೆ ಒಳ್ಳೆಯದಾಗಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಪ್ರಮಾಣ ವಚನ ಸ್ವೀಕಾರ್ ಸಮಾರಂಭದಲ್ಲಿ ಸ್ಟಾಲಿನ್‌ಗೆ ಅಪಮಾನ: ಕರುಣಾನಿಧಿ ಆಕ್ರೋಶ