Select Your Language

Notifications

webdunia
webdunia
webdunia
webdunia

ಜಯಲಲಿತಾ ಪ್ರಮಾಣ ವಚನ ಸ್ವೀಕಾರ್ ಸಮಾರಂಭದಲ್ಲಿ ಸ್ಟಾಲಿನ್‌ಗೆ ಅಪಮಾನ: ಕರುಣಾನಿಧಿ ಆಕ್ರೋಶ

ಜಯಲಲಿತಾ
ಚೆನ್ನೈ , ಸೋಮವಾರ, 23 ಮೇ 2016 (20:00 IST)
ಮುಖ್ಯಮಂತ್ರಿ ಜೆ.ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಡಿಎಂಕೆ ಮುಖಂಡ ಸ್ಟಾಲಿನ್‌‍ಗೆ 16ನೇ ಸರದಿ ಸಾಲಿನಲ್ಲಿ ಕುರಿಸಿರುವುದಕ್ಕೆ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮದ್ರಾಸಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಇಂದು ನಡೆದ ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸ್ಟಾಲಿನ್‌ ಹಾಜರಾಗಿದ್ದು, ಪ್ರಮಾಣ ವಚನ ಸ್ವೀಕಾರ ವೇದಿಕೆಯಿಂದ ತುಂಬಾ ದೂರದಲ್ಲಿ ಆಸನದ ವ್ಯವಸ್ಥೆ ಮಾಡಿ ಡಿಎಂಕೆ ಪಕ್ಷಕ್ಕೆ ಅಪಮಾನ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ. 
 
ಎಐಎಡಿಎಂಕೆ ಪಕ್ಷದ ಮುಖಂಡ ಆರ್.ಶರತ್ ಕುಮಾರ್ ಚುನಾವಣೆಯಲ್ಲಿ ಸೋಲನುಭವಿಸಿದರೂ ಅವರಿಗೆ ವೇದಿಕೆಯ ಹತ್ತಿರ ಆಸನ ಕಲ್ಪಿಸಲಾಗಿತ್ತು. ಸ್ಟಾಲಿನ್ ಚುನಾವಣೆಯಲ್ಲಿ ಜಯಗಳಿಸಿದ್ದರೂ ಅವರಿಗೆ ದೂರದಲ್ಲಿ ವೇದಿಕೆ ಕಲ್ಪಿಸಲಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪಕ್ಷ 89 ಸ್ಥಾನಗಳಿಸಿದ್ದು, ಸ್ಟಾಲಿನ್ ವಿರೋಧ ಪಕ್ಷದ ನಾಯಕರಾಗುವ ಅರ್ಹತೆ ಪಡೆದಿದ್ದಾರೆ. ಡಿಎಂಕೆ ನಾಯಕರಿಗೆ ಅಪಮಾನ ಮಾಡಲು ವ್ಯವಸ್ಥಿತವಾದ ಪಿತೂರಿ ಮಾಡಲಾಗಿತ್ತು ಎಂದು ಆರೋಪಿಸಿದರು.
 
ಕಳೆದ 2001 ರಲ್ಲಿ ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿದ್ದ ಸ್ಟಾಲಿನ್, ಇದೀಗ ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ಸ್ವಜನ ಪಕ್ಷಪಾತದಿಂದ ಇಡೀ ವ್ಯವಸ್ಥೆ ಹಾಳಾಗಿದೆ: ಸಂತೋಷ್ ಹೆಗ್ಡೆ