Select Your Language

Notifications

webdunia
webdunia
webdunia
webdunia

ಇನ್ಫೋಸಿಸ್ ಕಚೇರಿಯಲ್ಲೇ ಟೆಕ್ಕಿಯ ಹತ್ಯೆ

ಇನ್ಫೋಸಿಸ್ ಕಚೇರಿಯಲ್ಲೇ ಟೆಕ್ಕಿಯ ಹತ್ಯೆ
ಪುಣೆ , ಸೋಮವಾರ, 30 ಜನವರಿ 2017 (12:18 IST)
25 ವರ್ಷದ ಮಹಿಳಾ ಟೆಕ್ಕಿಯನ್ನು ಆಕೆ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿಯೇ ಉಸಿರುಗಟ್ಟಿಸಿ ಹತ್ಯೆಗೈದ ಹೇಯ ಘಟನೆ ಪುಣೆಯಲ್ಲಿ ನಡೆದಿದೆ. 
ಮೃತಳನ್ನು ಕೇರಳ ಮೂಲದ ಕೆ. ರಸಿಲಾ ರಾಜು ಎಂದು ಗುರುತಿಸಲಾಗಿದ್ದು, ಹಿಂಜವಾಡಿ ಪ್ರದೇಶದ ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್‌ನಲ್ಲಿ‌ರುವ ಇನ್ಫೋಸಿಸ್‌ನಲ್ಲಿ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ.
 
ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿರಬಹುದು ಪೊಲೀಸರು ತಿಳಿಸಿದ್ದು, ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.
 
ಭಾನುವಾರವಿದ್ದರೂ ರಸಿಲಾ ಕೆಲಸಕ್ಕೆ ಬಂದಿದ್ದು, ಆಕೆಯ ಸಹೋದ್ಯೋಗಿಗಳಿಬ್ಬರು ಬೆಂಗಳೂರಿನಿಂದ ಕೆಲಸ ಮಾಡುತ್ತಿದ್ದರು. ಸಂಜೆ 6ರ ಸುಮಾರಿಗೆ ರಸಿಲಾ ತಮ್ಮ ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲವೆಂದು ಕಂಪನಿ ವ್ಯವಸ್ಥಾಪಕರು ಸೆಕ್ಯುರಿಟಿ ಗಾರ್ಡ್ ಬಳಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಆತ ಅಲ್ಲಿಗೆ ಹೋಗಿ ನೋಡಲಾಗಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾನೆ.
 
ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಮರ್ಡರ್