Select Your Language

Notifications

webdunia
webdunia
webdunia
webdunia

ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಮರ್ಡರ್

ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಮರ್ಡರ್
ಬೆಂಗಳೂರು , ಸೋಮವಾರ, 30 ಜನವರಿ 2017 (10:24 IST)
ಏಕವಚನದಲ್ಲಿ ಮಾತನಾಡಿಸಿದ್ದಕ್ಕೆ ಗ್ರಾಹಕನೇ ವ್ಯಾಪಾರಿಯನ್ನು ಕೊಲೆಗೈದ ಹೇಯ ಘಟನೆ ರವಿವಾರ ತಡರಾತ್ರಿ ಬೆಂಗಳೂರಿನಲ್ಲಿ ನಡೆದಿದೆ. 
ಹಳೆ ಬೈಯ್ಯಪ್ಪನ ಹಳ್ಳಿಯ ಅಂಬೇಡ್ಕರ್ ನಗರದ ಬೇಕರಿಯೊಂದರಲ್ಲಿ ಈ ಕೃತ್ಯ ನಡೆದಿದ್ದು, ಮೃತನನ್ನು ಅದೇ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮುರಳಿ (48) ಎಂದು ಗುರುತಿಸಲಾಗಿದೆ. 
 
ರಾತ್ರಿ 12.15 ರ ಸುಮಾರಿಗೆ ಜಯರಾಜ್ ಎಂಬಾತ ಬೇಕರಿಗೆ ಆಗಮಿಸಿದ್ದು, ವ್ಯಾಪಾರಿ ಮುರಳಿ ಬಳಿ ಕೆಲ ತಿನಿಸನ್ನು ಕೇಳಿದ್ದಾನೆ. ಈ ಸಂದರ್ಭದಲ್ಲಿ ಮುರಳಿ ಏಕವಚನದಲ್ಲಿ ಮಾತನಾಡಿದ್ದರಿಂದ ಕೆರಳಿದ ಜಯರಾಜ್ ಜಗಳಕ್ಕೀಳಿದಿದ್ದಾನೆ. ಜಗಳ ತಾರಕಕ್ಕೇರುತ್ತಿದ್ದಂತೆ ಜಯರಾಜ್ ಅಲ್ಲೇ ಇದ್ದ ಚಾಕುವಿನಿಂದ ಮುರಳಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದಾನೆ. 
 
ಆರೋಪಿ ಜಯರಾಜ್ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. 
 
ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಗಂತುಕನ ಅಟ್ಟಹಾಸ; ಮಸೀದಿಗೆ ನುಗ್ಗಿ ಮಾರಣಹೋಮ