Webdunia - Bharat's app for daily news and videos

Install App

Indore murder: ರಾಜ ರಘುವಂಶಿ ಮರಣೋತ್ತರ ಪರೀಕ್ಷೆಯಲ್ಲಿ ಶಾಕಿಂಗ್ ಸತ್ಯಗಳು ಬಯಲು

Krishnaveni K
ಸೋಮವಾರ, 9 ಜೂನ್ 2025 (18:28 IST)
ಇಂಧೋರ್: ಹನಿಮೂನ್ ಗೆಂದು ಪತಿಯನ್ನು ಕರೆದೊಯ್ದು ಪತ್ನಿಯೇ ಪತಿಯನ್ನು ಕೊಲೆಗೈದ ಇಂಧೋರ್ ನ ರಾಜ ರಘುವಂಶಿ ಮರಣೋತ್ತರ ಪರೀಕ್ಷೆಯಲ್ಲಿ ಸಾಕಷ್ಟು ಶಾಕಿಂಗ್ ಸತ್ಯಗಳು ಬಯಲಾಗಿವೆ.

ಮದುವೆಯಾಗಿ ಒಂದೇ ವಾರಕ್ಕೆ ಪತಿಯನ್ನು ಕರೆದುಕೊಂಡು ಹನಿಮೂನ್ ಗೆಂದು ಆರೋಪಿ ಸೋನಮ್ ಮೇಘಾಲಯಕ್ಕೆ ತೆರಳಿದ್ದಳು. ಇಲ್ಲಿ ತನ್ನ ಪ್ರಿಯಕರನ ಸ್ನೇಹಿತರ ಜೊತೆ ಸೇರಿಕೊಂಡು ಪತಿಯನ್ನು ಕೊಲೆಗೈದು ಮೃತದೇಹವನ್ನು ಕಮರಿಗೆ ಬಿಸಾಕಿ ತಲೆಮರೆಸಿಕೊಂಡಿದ್ದಳು.

ಇದೀಗ ಪೊಲೀಸರು ಎಲ್ಲಾ ಆರೋಪಿಗಳನ್ನೂ ಸೆರೆ ಹಿಡಿದು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಮತ್ತಷ್ಟು ವಿಚಾರಗಳು ಬಯಲಾಗಿವೆ. ಹರಿತವಾದ ಆಯುಧ ಬಳಸಿ ರಘುವಂಶಿ ತಲೆಗೆ ಹೊಡೆಯಲಾಗಿತ್ತು. ಇದರಿಂದಾಗಿ ತಲೆಯಲ್ಲಿ ಎರಡು ಮಾರಣಾಂತಿಕ ಗಾಯಗಳಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ತನ್ನ ಗಂಡನನ್ನು ಕೊಲೆಗೈಯುವ ಉದ್ದೇಶದಿಂದಲೇ ಸೋನಮ್ ಬೈಕ್ ರೈಡ್ ನೆಪದಲ್ಲಿ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಳು. ಹೋಗುವ ಮೊದಲು ಹಂತಕರಿಗೆ ತಮ್ಮ ಲೊಕೇಷನ್ ಕೂಡಾ ಕಳುಹಿಸಿದ್ದಳು. ಬಳಿಕ ಯಾರೂ ಇಲ್ಲದ ಸ್ಥಳ ನೋಡಿಕೊಂಡು ಗಂಡನಿಗೆ ಖೆಡ್ಡಾ ತೋಡಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೂರಿಯಾ ಗೊಬ್ಬರ ಕೊಡಿ ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದ ಸಿದ್ದರಾಮಯ್ಯ

ಧರ್ಮಸ್ಥಳ ಕೇಸ್ ನಲ್ಲಿ ಮಹತ್ವದ ಹೆಜ್ಜೆಯಿಟ್ಟ ಎಸ್ಐಟಿ

ವಿಧಾನಸಭೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಅಕ್ರಮದಿಂದನಾ: ಬಿವೈ ವಿಜಯೇಂದ್ರ

ಸರ್ಕಾರೀ ಅಧಿಕಾರಿಗಳೊಂದಿಗೆ ಸಭೆ ನಡೆಸಲು ರಣದೀಪ್ ಸುರ್ಜೇವಾಲಗೆ ಅಧಿಕಾರ ಕೊಟ್ಟಿದ್ಯಾರು: ಜೆಡಿಎಸ್

ಇಂದಿರಾ ಗಾಂಧಿ ದಾಖಲೆ ಮುರಿದ ಮೋದಿ ಹಾಡಿ ಹೊಗಳಿದ ವಿಜಯೇಂದ್ರ

ಮುಂದಿನ ಸುದ್ದಿ
Show comments