ಗುವಾಹಟಿ: ಅಸ್ಸಾಂನಲ್ಲಿ ಸುರಿಯುತ್ತುರುವ ಭಾರೀ ಮಳೆಯಿಂದಾಗಿ 6 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ 2.6ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೂಡ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಮಳೆಯು ಮುಂದುವರೆಯದೇ ಇದ್ದರೆ ಬಹುಪಾಲು ಕಡೆಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದಿದ್ದಾರೆ.
ಭಾರೀ ಮಳೆಯಿಂದಾಗಿ ಸಂಭವಿಸಿದ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ವರ್ಷ ಭೂಕುಸಿತ ಹಾಗೂ ಪ್ರವಾಹದಿಂದ ಒಟ್ಟು 26 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಭಾರಿ ಮಳೆಯಿಂದಾಗಿ ಅಸ್ಸಾಂನ ಸ್ರಿಭೂಮಿ, ಹೈಲಾಕಂಡಿ ಹಾಗೂ ಕಚಾರ್ ಜಿಲ್ಲೆಗಳಲ್ಲಿ ಕ್ರಮವಾಗಿ 1.62 ಲಕ್ಷ, 52 ಸಾವಿರ ಹಾಗೂ 36 ಸಾವಿರ ಜನ ನಿರಾಶ್ರಿತರಾಗಿದ್ದರೆ. ಸರ್ಕಾರವು ನಾಲ್ಕು ಜಿಲ್ಲೆಗಳಲ್ಲಿ 130 ಪರಿಹಾರ ಕೇಂದ್ರಗಳನ್ನು ತೆರದಿದ್ದು, 24,908 ನಿರಾಶ್ರಿತರು ಅಲ್ಲಿದ್ದಾರೆ ಎಂದಿದ್ದಾರೆ.