Select Your Language

Notifications

webdunia
webdunia
webdunia
webdunia

17 ಅಡಿ ಎತ್ತರದ ನಡುಗುವ ಚಳಿಯಲ್ಲಿ ಸೇನೆಯಿಂದ ಯೋಗಾಭ್ಯಾಸ!

17 ಅಡಿ ಎತ್ತರದ ನಡುಗುವ ಚಳಿಯಲ್ಲಿ ಸೇನೆಯಿಂದ ಯೋಗಾಭ್ಯಾಸ!
bengaluru , ಮಂಗಳವಾರ, 21 ಜೂನ್ 2022 (14:08 IST)
ದೇಶದ ಅತೀ ಎತ್ತರದ ಗಡಿ ಪ್ರದೇಶವಾದ ದೇಶದ ಗಡಿಯಲ್ಲಿ 17 ಸಾವಿರ ಅಡಿ ಎತ್ತರದಲ್ಲಿ ಐಟಿಬಿಪಿ ಯೋಧರು ಯೋಗಾಭ್ಯಾಸ ನಡೆಸಿದರು.
8ನೇ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರದ ಲಡಾಖ್‍ನಿಂದ ಸಿಕ್ಕಿಂವರೆಗೆ ಇರುವ ವಿವಿಧ ಎತ್ತರದ ಹಿಮಾಲಯ ಪರ್ವತದಲ್ಲಿ ಯೋಗಾಭ್ಯಾಸವನ್ನು ಮಾಡಿದರು.
ಆಯುಷ್ ಸಚಿವಾಲಯವು ಈ ಬಾರಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗಿರುವುದರಿಂದ ಈ ವಿಷಯವನ್ನು ಇಟ್ಟುಕೊಂಡು 75 ವರ್ಷಗಳ ಪ್ರಮುಖ ವಿಷಯವನ್ನು ಇಟ್ಟುಕೊಂಡು ಯೋಗ ದಿನಾಚರಣೆ ಆಚರಿಸುತ್ತಿದೆ.
ಕೇಂದ್ರ ಮಂತ್ರಿಗಳಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ಪ್ರಮುಖ 75 ಸ್ಥಳಗಳನ್ನು ಗುರುತಿಸಿದೆ. ಇದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ದಸರಾ ಮೈದಾನದಲ್ಲಿ ಯೋಗವನ್ನು ಮಾಡಿದ್ದಾರೆ.
ಜಗತ್ತಿನಾದ್ಯಂತ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೇ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಯೋಗ ಗುರು ರಾಮದೇವ್ ಯೋಗ ಪ್ರದರ್ಶನ ನೀಡಿದ್ದರು. ಅನೇಕ ಮಕ್ಕಳು ಮತ್ತು ಇತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ