Publish Date: Thu, 13 May 2021 (09:34 IST)
Updated Date: Thu, 13 May 2021 (09:35 IST)
ಬೆಂಗಳೂರು: ಕೊರೋನಾದಿಂದಾಗಿ ಕೆಲಸ ಕಳೆದುಕೊಂಡು ಊಟಕ್ಕೆ ಪರದಾಡುತ್ತಿರುವವರಿಗೆ ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಊಟ ವಿತರಿಸಲು ಆರಂಭಿಸಿದೆ.
ರಾಜ್ಯ ರಾಜಧಾನಿ ಕೊರೋನಾದಿಂದ ಸಂಕಷ್ಟಕ್ಕೀಡಾಗಿದೆ. ಲಾಕ್ ಡೌನ್ ಬಳಿಕ ಎಷ್ಟೋ ಮಂದಿ ಇಲ್ಲಿ ಕೆಲಸವೂ ಇಲ್ಲದೇ ಊರಿನತ್ತ ಹೋಗಲೂ ಆಗದೇ ಊಟಕ್ಕಾಗಿ ಪರದಾಡುತ್ತಿದ್ದಾರೆ.
ಅಂತಹವರಿಗಾಗಿ ಬಿಬಿಎಂಪಿ ವತಿಯಿಂದ ಉಚಿತ ಊಟ ನೀಡಲಾಗುತ್ತಿದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಗೆ ತಲಾ 1 ಲಕ್ಷ ಊಟ-ಉಪಹಾರ ಒದಗಿಸಲಾಗುತ್ತದೆ ಎಂದು ಬಿಬಿಎಂಪಿ ತಿಳಿಸಿದೆ. ಅರ್ಹರು ಇದರ ಸದುಪಯೋಗಪಡಿಸಿಕೊಳ್ಳಬಹುದು.