Select Your Language

Notifications

webdunia
webdunia
webdunia
webdunia

ನದಿಗಳಿಂದಲೂ ಕೊರೋನಾ ಹರಡುವ ಅಪಾಯ

ನದಿಗಳಿಂದಲೂ ಕೊರೋನಾ ಹರಡುವ ಅಪಾಯ
ಲಕ್ನೋ , ಗುರುವಾರ, 13 ಮೇ 2021 (09:20 IST)
ಲಕ್ನೋ: ನದಿಗಳಿಂದಲೂ ಕೊರೋನಾ ಹರಡುವ ಭಯ ಈಗ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿ ತೀರದ ನಿವಾಸಿಗಳಿಗೆ ಶುರುವಾಗಿದೆ.


ಇದಕ್ಕೆ ಕಾರಣ ಇವೆರಡೂ ರಾಜ್ಯಗಳನ್ನು ಸಂಪರ್ಕಿಸುವ ಗಂಗಾ ನದಿ ತಟದಲ್ಲಿ ಕೊರೋನಾ ರೋಗಿಗಳ ಮೃತದೇಹಗಳು ತೇಲಿಕೊಂಡು ಬರುತ್ತಿವೆ. ಈ ಮೃತದೇಹಗಳಿಂದ ಕೊರೋನಾ ಹರಡಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಆದರೆ ಕೆಲವು ತಜ್ಞರ ಪ್ರಕಾರ ಕೊಳೆತ ಶವಗಳಿಂದ ಕೊರೋನಾ ಹರಡುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಸ್ಥಳೀಯರು ಈಗ ಈ ನದಿ ನೀರು ಉಪಯೋಗಿಸಲು ಹಿಂಜರಿಯುವಂತಾಗಿದೆ. ಅಲ್ಲದೆ, ಈ ವಿಚಾರ ಈಗ ಎರಡೂ ರಾಜ್ಯಗಳ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಮೂಲಗಳ ಪ್ರಕಾರ ಸುಮಾರು 70 ಕ್ಕೂ ಹೆಚ್ಚು ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಇಲ್ಲ!