Select Your Language

Notifications

webdunia
webdunia
webdunia
webdunia

ಪಾಕ್ ಮಣ್ಣು ಮುಕ್ಕಿಸಲು ಮತ್ತೊಂದು ಸರ್ಜಿಕಲ್ ಸ್ಟ್ರೈಕ್‌ಗೆ ಸೇನೆ ಸಿದ್ದತೆ

ಪಾಕ್ ಮಣ್ಣು ಮುಕ್ಕಿಸಲು ಮತ್ತೊಂದು ಸರ್ಜಿಕಲ್ ಸ್ಟ್ರೈಕ್‌ಗೆ ಸೇನೆ ಸಿದ್ದತೆ
ನವದೆಹಲಿ , ಸೋಮವಾರ, 26 ಡಿಸೆಂಬರ್ 2016 (15:38 IST)
ಧೈರ್ಯ ಮತ್ತು ಅಪ್ರತಿಮ ಸಾಹಸಕ್ಕೆ ಹೆಸರುವಾಸಿಯಾದ ಭಾರತೀಯ ಸೇನೆಯ ವಿಶೇಷ ಪಡೆಗಳು ಮತ್ತು ಕಮಾಂಡೊಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಎರಡನೇ ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.   
ವರದಿಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಭಾರತೀಯ ಸೇನೆಗಾಗಿ ಭಾರಿ ವೆಚ್ಚದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಈಗಾಗಲೇ ಅತ್ಯಾಧುನಿಕ ಹೆಲಿಕಾಪ್ಟರ್‌ಗಳನ್ನು ಕೂಡಾ ಸೇನೆಯ ಸುರ್ಪದಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ.
 
ರೈಫಲ್ಸ್, ಮಿಷಿನ್ ಗನ್, ಗ್ರೇನೆಡ್ ಲಾಂಚರ್ ಖರೀದಿಗಾಗಿ 300 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ನೌಕಾದಳಕ್ಕಾಗಿ 6 ಮಲ್ಟಿ ಮಿಷನ್ ಎರ್‌ಕ್ರಾಫ್ಟ್‌ಗಳನ್ನು ಖರೀದಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
ಭಾರತೀಯ ವಾಯುಸೇನೆಗೆ ಮತ್ತೊಂದು ಸಿ-17 ಏರ್‌ಕ್ರಾಫ್ಟ್ ಕ್ಯಾರಿಯರ್ ದೊರೆಯಲಿದೆ. ಸ್ವಯಂಚಾಲಿತ ಗ್ರೇನೆಡ್ ಲಾಂಚರ್‌ಗಳನ್ನು ಕೂಡಾ ಭಾರತೀಯ ಸೇನೆಗೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಂದು ಕೊಲೆಗಾರ, ಇಂದು ಸಿಇಒ: ಯುವ ಮನಪರಿವರ್ತನೆಯೇ ಈತನ ಗುರಿ