Select Your Language

Notifications

webdunia
webdunia
webdunia
webdunia

ಅಂದು ಕೊಲೆಗಾರ, ಇಂದು ಸಿಇಒ: ಯುವ ಮನಪರಿವರ್ತನೆಯೇ ಈತನ ಗುರಿ

ಅಂದು ಕೊಲೆಗಾರ, ಇಂದು ಸಿಇಒ: ಯುವ ಮನಪರಿವರ್ತನೆಯೇ ಈತನ ಗುರಿ
ಸೊಮರ್ವಿಲ್ಲೆ , ಸೋಮವಾರ, 26 ಡಿಸೆಂಬರ್ 2016 (15:09 IST)
ವ್ಯಕ್ತಿಯೊಬ್ಬನನ್ನು ಕೊಂದು ಬರೊಬ್ಬರಿ 16 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ಪ್ರತಿಷ್ಠಿತ ಸಂಸ್ಥೆಯೊಂದರ ಸಿಇಒ ಆಗಿ ಬೆಳೆದ ಪ್ರೇರಣಾದಾಯಕ ಕಥೆ ಇದು. 

 
ಜಾನ್ ವಾಲ್‌ವೆರ್ಡೆ ತನ್ನ ಗೆಳತಿಯ ಮೇಲೆ ಅತ್ಯಾಚಾರಗೈದವನನ್ನು ಕೊಂದು 16 ವರ್ಷ ಶಿಕ್ಷೆಗೊಳಗಾಗಿದ್ದ. ಜೈಲಿನಲ್ಲಿದ್ದ ಆತ ತಾನು ಮಾಡಿದ ತಪ್ಪಿಗಾಗಿ ಕೊರಗುತ್ತ ಸಮಯ ಕಳೆಯಲಿಲ್ಲ.ಆಚೆ ಬಂದ ಮೇಲೆ ತಾನು ತಲೆ ಎತ್ತಿ ಬದುಕಲು ಏನು ಮಾಡಬೇಕೋ ಎಲ್ಲವನ್ನು ಮಾಡಿದ.
 
ಜೈಲಿನಲ್ಲಿದ್ದುಕೊಂಡೇ ಎರಡು ಕಾಲೇಜು ಪದವಿ ಪಡೆದ ಜಾನ್ ಹೆಚ್‌ಐವಿ ಆಪ್ತಸಮಾಲೋಚಕನಾಗಿ ಕೆಲಸ ಮಾಡಿದ. ತನ್ನ ಸಹಕೈದಿಗಳಿಗೆ ಅಕ್ಷರಜ್ಞಾನ ಕಲಿಸಿದ. ಮತ್ತೀಗ ಆತ ಕಷ್ಟದಲ್ಲಿರುವ ಯುವ ಜನರಿಗೆ ಸಹಾಯಮಾಡುವ ಉದ್ದೇಶದಿಂದ ರೂಪುಗೊಂಡಿರುವ ಸಂಸ್ಥೆಯೊಂದರ ಸಿಇಒ ಆಗುತ್ತಿದ್ದಾನೆ. 
 
ಈ ಸಂಸ್ಥೆ ಆರ್ಥಿಕ ದುಃಸ್ಥಿತಿಯಲ್ಲಿರುವ, ಅಪರಾಧದ ಹಾದಿ ತುಳಿದಿರುವ ಯುವಜನರ ಶ್ರೇಯೋಭಿವೃದ್ಧಿಗೆ ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಿದೆ.
 
ಈ ಕುರಿತು ಪ್ರತಿಕ್ರಿಯಿಸುವ ಜಾನ್, ಅವರು ನನ್ನಂತಹ ಹಾದಿಯನ್ನು ತುಳಿದಿರಬಹುದು. ಇಂತವರು ಕಲ್ಪಿಸಲಾಗದಂತಹ ಸಾಧನೆಯನ್ನು ಮಾಡಬಹುದೆಂಬುದನ್ನು ಸಾಧಿಸುವುದು ನನ್ನ ಗುರಿ ಎನ್ನುತ್ತಾನೆ ಜಾನ್.
 
1991ರಲ್ಲಿ ಜಾನ್ 20 ವರ್ಷದವನಿದ್ದಾಗ ಆತನ ಪ್ರೇಯಸಿ ಪೋಟೋಗ್ರಾಫರ್‌ ಜೊಯಲ್ ಎಂಬಾತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ದೂರಿದ್ದಳು. ಜೊಯಲ್ ಮತ್ತೆರಡು ಅತ್ಯಾಚಾರ ಪ್ರಕರಣಗಳ ಆರೋಪವನ್ನು ಕೂಡ ಹೊತ್ತಿದ್ದ. ಕೋಪದ ಭರದಲ್ಲಿ ಜಾನ್ ಆತನನ್ನು ಗುಂಡಿಟ್ಟು ಕೊಂದಿದ್ದ. ಈ ಕೃತ್ಯಕ್ಕಾಗಿ ಆತನಿಗೆ 16 ವರ್ಷ ಜೈಲು ಶಿಕ್ಷೆಯಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರು ಎರಡು ತಲೆಯ ಹಾವುಗಳಿದ್ದಂತೆ: ಸಚಿವ ರಮಾನಾಥ್ ರೈ