ನವದೆಹಲಿ: ಪುಲ್ವಾಮಾದಲ್ಲಿ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಬಾಲಾಕೋಟ್ ವಾಯು ದಾಳಿ ನಡೆಸಿದ ಬಳಿಕ ಪಾಕಿಸ್ತಾನದಿಂದ ಎದುರಾಗಬಹುದಾದ ಪ್ರತೀಕಾರಕ್ಕೆ ತಯಾರಾಗಿತ್ತು ಎಂದು ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇಬರಾಜ್ ಅಂಬು ಬಹಿರಂಗಪಡಿಸಿದ್ದಾರೆ.
ಬಾಲಾಕೋಟ್ ದಾಳಿ ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿತ್ತು. ಒಂದು ವೇಳೆ ಆಗ ಪಾಕಿಸ್ತಾನ ಮರಳಿ ದಾಳಿ ನಡೆಸಿದ್ದರೆ ಯುದ್ಧವೇ ನಡೆಸಲೂ ಭಾರತ ಸನ್ನದ್ಧವಾಗಿತ್ತು ಎಂದು ಸೇನಾ ನಾಯಕ ಬಹಿರಂಗಪಡಿಸಿದ್ದಾರೆ.
ಫೆಬ್ರವರಿ 27 ರಂದು ಯಾವುದೇ ದಾಳಿಗೂ ನಾವು ಸನ್ನದ್ಧರಾಗಿದ್ದೆವು. ಸರ್ಕಾರ ಮೂರೂ ಸೇನಾ ತುಕಡಿಗಳ ಉಪ ನಾಯಕರಿಗೆ ಅಗತ್ಯ ವಸ್ತುಗಳ ಸಂಗ್ರಹಣೆ ಮಾಡಿಡಲು ಸೂಚಿಸಿತ್ತು. ನಮಗೆ ವಿಶೇಷ ಹಣಕಾಸಿನ ಸಹಾಯ ಒದಗಿಸಲಾಗಿತ್ತು ಎಂದು ಜನರಲ್ ಅಂಬು ತಿಳಿಸಿದ್ದಾರೆ.