ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಹೊಸ ನಿಯಮ ಜಾರಿ

Webdunia
ಶನಿವಾರ, 31 ಆಗಸ್ಟ್ 2019 (11:40 IST)
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ  ಹೊಸ ನಿಯಮ ಜಾರಿಗೆ ಬಂದಿದ್ದು, ಪ್ಲಾನ್ ಪ್ರಕಾರ ಮನೆ ಕಟ್ಟದಿದ್ದವರಿಗೆ ಬಾರೀ ಹೊಡೆತ ಬೀಳುತ್ತೆ ಎನ್ನಲಾಗಿದೆ.




ಮನೆ ನಿರ್ಮಿಸುವುದಕ್ಕೂ ಮುನ್ನ ಬಿಬಿಎಂಪಿ ಜೊತೆ ಒಪ್ಪಂದ ಮಾಡಿಕೊಂಡಿರಬೇಕು.  ಪ್ಲಾನ್ ನಂತೆ ಮನೆ ಕಟ್ಟದಿದ್ದರೆ ಶೇ.10ರಷ್ಟು ಜಾಗ ಬಿಬಿಎಂಪಿ ಯ ಪಾಲಾಗುವುದು. ಹಾಗೇ  ಅಪಾರ್ಟ್ ಮೆಂಟ್, ಮನೆಗಳಾದರೆ ಶೇಕಡಾ 5 ರಷ್ಟು ಜಾಗ ,ಕಟ್ಟಡ ನಿರ್ಮಿತ ಪ್ರದೇಶದ ಶೇ.10ರಷ್ಟು ಜಾಗ ಬಿಬಿಎಂಪಿ ಪಾಲಾಗಲಿದೆ ಎನ್ನಲಾಗಿದೆ. ಒಂದು ವೇಳೆ ಬಿಬಿಎಂಪಿ ಪ್ಲಾನ್ ಉಲ್ಲಂಘನೆಯಾದರೆ ಮನೆ ವಶಕ್ಕೆ ಪಡೆದು ಮನೆ ಸಂಪೂರ್ಣ ಧ್ವಂಸಕ್ಕೂ ಹೊಸ ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೇ  ಅಕ್ರಮವಾಗಿ ನಿರ್ಮಿಸಿ ಮಾರಾಟ ಮಾಡಿದ್ರೆ ಸಂಪೂರ್ಣ ವಶಕ್ಕೆ ಪಡೆಯಲಾಗುವುದು.


ಸ್ವಾಧೀನ ಪತ್ರ(ಓಸಿ) ಇಲ್ಲದಿದ್ರೆ ನೀರು, ವಿದ್ಯುತ್ ಸಿಗುವುದಿಲ್ಲ.ಹಾಗೇ ಪ್ಲಾನ್ ಮಂಜೂರಾದ 2  ವರ್ಷದಲ್ಲಿ ಮನೆ ಕಟ್ಟಲೇಬೇಕು, ಹೊಸದಾಗಿ ನಿರ್ಮಿಸುವ 108 ಚ.ಮೀ,ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆಗಳಿಗೆ ಮಳೆಕೊಯ್ಲು ಕಡ್ಡಾಯ. ಕಟ್ಟಡ ನಿರ್ಮಾಣ ಮಾಡಲು ಅನುಮತಿಗೆ 20 ದಾಖಲೆಗಳು, 12 ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಈ ಹೊಸ ರೂಲ್ಸ್ ನ್ನು ಇಂದಿನ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಲಿದ್ದು, ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಆಗುತ್ತಿದ್ದಂತೆ ಈ ನಿಯಮ  ಜಾರಿಗೆ ಬರಲಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಚಿನ್ನವಿಲ್ಲ, ವಜ್ರವಿಲ್ಲ: ಕೇರಳದ ವಧುವೊಬ್ಬಳು ಚಿನ್ನಾಭರಣವಿಲ್ಲದ ಲುಕ್‌ ದೇಶದೆಲ್ಲೆಡೆ ಸದ್ದು

ಮಾಸ್ಕ್ ಹಾಕಿಕೊಂಡು ಬಿಎಂಟಿಸಿ ಏರಿದ ಸಚಿವ ಬೈರತಿ ಸುರೇಶ್: ಚಿಲ್ರೆ ಇಲ್ಲ ಎಂದರೆ ಸಚಿವರನ್ನೇ ಬಸ್ ನಿಂದ ಕೆಳಿಗಿಳಿಸೋದಾ Video

Video: ಹೀಗಾದ್ರೆ ಡೆಲಿವರಿ ಬಾಯ್ಸ್‌ಗೆ ಡೋರ್ ಓಪನ್ ಮಾಡುವುದು ಹೇಗೆ, ತನಗಾದ ಕೆಟ್ಟ ಅನುಭವ ಬಿಚ್ಚಿಟ್ಟ ಯುವತಿ

Karnataka Weather: ನಿರಂತರ ಮಳೆಯಾಗಿರುವ ಕರಾವಳಿ ಭಾಗದಲ್ಲಿ ಇಂದು ಹೇಗಿರಲಿದೆ ಗೊತ್ತಾ ಹವಾಮಾನ

ಎಸ್‌ ಜಾನಕಿ ಪ್ರತಿ ಮಲಯಾಳಿ ಮನೆಯ ಸದಸ್ಯರಾಗಿದ್ದಾರೆ: ಕೇರಳ ಸಿಎಂ ವಿಡಿ ಸತೀಶನ್‌

ಮುಂದಿನ ಸುದ್ದಿ
Show comments