Select Your Language

Notifications

webdunia
webdunia
webdunia
Thursday, 13 March 2025
webdunia

ಜವಾನರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸಂಶಯ ಪಡುತ್ತಿರುವವರ ಬಗ್ಗೆ ಭಾರತೀಯ ಸೇನೆ ಅಸಮಾಧಾನ

ಜವಾನರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸಂಶಯ ಪಡುತ್ತಿರುವವರ ಬಗ್ಗೆ ಭಾರತೀಯ ಸೇನೆ ಅಸಮಾಧಾನ
ನವದೆಹಲಿ , ಭಾನುವಾರ, 5 ಜುಲೈ 2020 (09:22 IST)
ನವದೆಹಲಿ: ಪ್ರಧಾನಿ ಮೋದಿ ಗಲ್ವಾನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಗಾಯಗೊಂಡಿದ್ದ ಸೈನಿಕರ ಜತೆ ಮಾತುಕತೆ ನಡೆಸುತ್ತಿರುವ ಫೋಟೋ ತೋರಿಕೆಗೆ ಎಂದಿದ್ದ ಕಾಂಗ್ರೆಸ್ ಮತ್ತು ಕೆಲವು ವಿರೋಧ ಪಕ್ಷಗಳ ನಾಯಕರ ಟೀಕೆಗೆ ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.


ಪ್ರಧಾನಿ ಮೋದಿ ಜತೆ ಸಂವಾದ ನಡೆಸುತ್ತಿರುವ ಫೋಟೋದಲ್ಲಿ ಜವಾನರಿಗೆ ಚಿಕಿತ್ಸೆ ನೀಡಲಾಗುತ್ತಿರುವುದೇ ಸುಳ್ಳು ಎನಿಸುತ್ತಿದೆ. ಇಲ್ಲಿ ಡ್ರಿಪ್ಸ್ ಆಗಲೀ, ಔಷಧವಾಗಲೀ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ದತ್ ಟ್ವೀಟ್ ಮಾಡಿದ್ದರು.

ಈ ಟೀಕೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನಾ ಮೂಲಗಳು ‘ಭಾರತೀಯ ವೀರ ಯೋಧರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ’ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮೊದಲ ದೇಶಿ ಆ್ಯಪ್ ಅಲಾಯಿಮೆಂಟ್ಸ್ ಗೆ ಚಾಲನೆ