Select Your Language

Notifications

webdunia
webdunia
webdunia
webdunia

ಕುಪ್ವಾರದಲ್ಲಿ ದಾಳಿ ನಡೆಸಿದ್ದ ಉಗ್ರರನ್ನ ಕೊಂದು ಸೇಡು ತೀರಿಸಿಕೊಂಡ ಭಾರತೀಯಸೇನೆ

ಕುಪ್ವಾರದಲ್ಲಿ ದಾಳಿ ನಡೆಸಿದ್ದ ಉಗ್ರರನ್ನ ಕೊಂದು ಸೇಡು ತೀರಿಸಿಕೊಂಡ ಭಾರತೀಯಸೇನೆ
ಹಂದ್ವಾರ , ಭಾನುವಾರ, 14 ಮೇ 2017 (18:33 IST)
ಜಮ್ಮು ಮತ್ತು ಕಾಶ್ಮೀರದ ಹಂದ್ವಾರದ ವರಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಇ ತೊಯಿಬಾ ಉಗ್ರರನ್ನ ಭದ್ರತಾ ಪಡೆ ಹೊಡೆದುರುಳಿಸಿದೆ.
 

 21 ರಾಷ್ಟ್ರೀಯ ರೈಫಲ್ ಮತ್ತು ಹಂದ್ವಾರ ಪೊಲೀಸ್ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರಿಗಾಗಿ ಶೋಧ ನಡೆಸಲಾಗಿತ್ತು. ಸೇನೆಗೆ ಗುಂಡಿನ ದಾಳಿಯಲ್ಲಿ ಹತರಾದ ಉಗ್ರರು ಏಪ್ರಿಲ್ 26ರಂದು ಕುಪ್ವಾರದಲ್ಲಿ ದಾಳಿ ನಡೆಸಿ ಮೂವರು ಯೋಧರ ಬಲಿ ಪಡೆದಿದ್ದರು.

ಉಗ್ರರ ಶವಗಳನ್ನ ಕೊಂಡೊಯ್ಯಲ಻ಗಿದ್ದು, ಗುರುತು ಪತ್ತೆಮಾಡುವ ಕಾರ್ಯಪ್ರಗತಿಯಲ್ಲಿದೆ. ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿ ಹೆಚ್ಚುತ್ತಿದ್ದು, ಗಡಿಯಲ್ಲಿ ಭಾರತ ಸೇನೆಯ ಪಹರೆ ಹೆಚ್ಚಿಸಲಾಗಿದೆ. ಪಾಕಿಸ್ತಾನ ಗಡಿಯ ಚಟುವಟಿಕೆ ಬಗ್ಗೆ ನಿಗಾ ಇಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಲತಂದೆಯಿಂದಲೇ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಮಗಳು ಗರ್ಭಿಣಿಯಾದಾಗ ಸತ್ಯ ಬಯಲು