Select Your Language

Notifications

webdunia
webdunia
webdunia
webdunia

ಭಾರತದಲ್ಲೂ ತಾಲಿಬಾನ್ನಂಥ ಭಯಾನಕ ಪರಿಸ್ಥಿತಿ ಎದುರಾಗುತ್ತೆ: ಚಂದ್ರಶೇಖರ ರಾವ್

ಭಾರತದಲ್ಲೂ ತಾಲಿಬಾನ್ನಂಥ ಭಯಾನಕ ಪರಿಸ್ಥಿತಿ ಎದುರಾಗುತ್ತೆ: ಚಂದ್ರಶೇಖರ ರಾವ್
ಹೈದರಾಬಾದ್ , ಶುಕ್ರವಾರ, 13 ಜನವರಿ 2023 (16:33 IST)
ಹೈದರಾಬಾದ್ : ಬಿಜೆಪಿ ಸರ್ಕಾರ ಧಾರ್ಮಿಕ ಮತ್ತು ಜಾತಿ ಮತಾಂಧತೆ ಉತ್ತೇಜಿಸಿದರೆ, ಸಮುದಾಯಗಳನ್ನ ಒಡೆಯುವ ಕೆಲಸ ಮಾಡಿದ್ರೆ ಮುಂದೆ ಭಾರತದಲ್ಲೂ ತಾಲಿಬಾನ್ ನಂತಹ ಭಯಾನಕ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಎಚ್ಚರಿಕೆ ನೀಡಿದ್ದಾರೆ.

ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಕಾರ್ಯಕ್ರಮದ ವೇಳೆ ಮಾತನಾಡಿರುವ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ದ್ವೇಷದಿಂದ ದೇಶದ ಜೀವನಾಡಿಯೇ ಸುಟ್ಟು ಭಸ್ಮವಾಗುವ ಸಂದರ್ಭ ಎದುರಾಗಲಿದೆ. ಆದ್ದರಿಂದ ವಿಶೇಷವಾಗಿ ಯುವಕರು ಜಾಗೃತರಾಗಬೇಕು ಎಂದು ಕರೆ ನೀಡಿದ್ದಾರೆ. 

2014 ರಲ್ಲಿ ರಾಜ್ಯ ರಚನೆಯ ಸಮಯದಲ್ಲಿ ತೆಲಂಗಾಣದ ರಾಜ್ಯ ಆಂತರಿಕ ಉತ್ಪನ್ನವು 5 ಲಕ್ಷ ಕೋಟಿ ರೂ. ಇತ್ತು. ಇಂದು 11.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಕೇಂದ್ರ ಸರ್ಕಾರವು ತೆಲಂಗಾಣ ರಾಜ್ಯಕ್ಕೆ ಸರಿಸಮನಾಗಿ ಕಾರ್ಯ ನಿರ್ವಹಿಸದೇ ಇರೋದ್ರಿಂದ ರಾಜ್ಯದ ಜಿಎಸ್ಡಿಪಿ ಇಳಿಮುಖವಾಗಿದೆ.

ಕೇಂದ್ರದ ಈ ಅಸಮರ್ಥ ನೀತಿಗಳಿಂದಾಗಿ ತೆಲಂಗಾಣ ರಾಜ್ಯವೊಂದರಲ್ಲೇ 3 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅರ್ಥಶಾಸ್ತ್ರಜ್ಞರು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ. ಮಾಹಿತಿ ಪ್ರಕಾರ, ಜಿಎಸ್ಡಿಪಿ 14.50 ಲಕ್ಷ ಕೋಟಿ ಇರಬೇಕಿತ್ತು. ಆದರೆ 11.50 ಲಕ್ಷ ಕೋಟಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಚಿತ್ತ : ಬಿಜೆಪಿಯಿಂದ ಪದೇ ಪದೇ ಆಹ್ವಾನ ಏಕೆ?