Publish Date: Thu, 04 May 2017 (10:45 IST)
Updated Date: Thu, 04 May 2017 (10:55 IST)
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧವಾಗುತ್ತಾ? ಈ ಪ್ರಶ್ನೆಗೆ ರಕ್ಷಣಾ ಸಚಿವ ಅರುಣ್ ಜೇಟ್ಲಿ ಉತ್ತರವೇನು ಗೊತ್ತಾ?
ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರ ಉತ್ತರ ‘ನಮ್ಮ ಸೇನೆಯ ಮೇಲೆ ಭರವಸೆ ಇಡಿ’ ಎಂದಾಗಿತ್ತು. ಭಾರತೀಯ ಯೋಧರ ಶಿರಚ್ಛೇದನ ಪ್ರಕರಣದ ನಂತರ ಉಭಯ ದೇಶಗಳ ನಡುವಣ ಸಂಬಂಧ ಮತ್ತಷ್ಟು ಹಳಸಿದ ಹಿನ್ನಲೆಯಲ್ಲಿ ಅವರು ಈ ರೀತಿ ಉತ್ತರಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯ ಒದಗಿಸಿದರೂ ಸಾಲದು ಎನ್ನುತ್ತಿರುವ ಪಾಕ್ ಆರೋಪಗಳನ್ನು ಜೇಟ್ಲಿ ತಳ್ಳಿ ಹಾಕಿದ್ದಾರೆ. ನಮ್ಮ ಬಳಿ ಇದು ಪಾಕ್ ನದ್ದೇ ಕೃತ್ಯ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ