Select Your Language

Notifications

webdunia
webdunia
webdunia
Thursday, 10 April 2025
webdunia

ಶೀಘ್ರದಲ್ಲೇ ಬೆಂಗಳೂರಿಗೆ ಬಂದಿಳಿಯಲಿರುವ ನಯಾಗರ ಫಾಲ್ಸ್!

ಲಾಲ್ ಬಾಗ್ ಸಸ್ಯ ಕಾಶಿ
Bangalore , ಗುರುವಾರ, 4 ಮೇ 2017 (07:25 IST)
ಬೆಂಗಳೂರು: ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಮೋಹ ಎಲ್ಲರಿಗೂ ಇರುತ್ತದೆ. ಅದೀಗ ನನಸಾಗಲಿದೆ. ಅದಕ್ಕಾಗಿ ಇನ್ನು ಅಮೆರಿಕಾಗೆ ಹೋಗಬೇಕಿಲ್ಲ.

 
ಯಾಕೆಂದರೆ ಶೀಘ್ರದಲ್ಲೇ ನಯಾಗರ ಫಾಲ್ಸ್ ಬೆಂಗಳೂರಿಗೆ ಬಂದಿಳಿಯಲಿದೆ. ಬೆಂಗಳೂರಿನ ಲಾಲ್ ಬಾಗ್ ಸಸ್ಯ ಕಾಶಿಯಲ್ಲಿ ಮಿನಿ ನಯಾಗರ ಫಾಲ್ಸ್ ನಿರ್ಮಾಣವಾಗಲಿದೆ. ಇದಕ್ಕಾಗಿ ಶೀಘ್ರದಲ್ಲೇ ನೀಲಿ ನಕ್ಷೆ  ತಯಾರಾಗಲಿದೆ ಎಂದು ಲಾಲ್ ಬಾಗ್ ನಿರ್ದೇಶಕರು ತಿಳಿಸಿದ್ದಾರೆ.

ಲಾಲ್ ಬಾಗ್ ಸುತ್ತಮುತ್ತ ಜಲ ಮೂಲಗಳನ್ನೇ ಬಳಸಿ ಮಿನಿ ನಯಾಗರ ಫಾಲ್ಸ್ ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮಿನಿ ಫಾಲ್ಸ್  25 ಫೀಟ್ ಉದ್ದ ಮತ್ತು 120 ಫೀಟ್ ಅಗಲವಿರಲಿದೆ.

ವರ್ಷ ಪೂರ್ತಿ ಇಲ್ಲಿನ ಕೆರೆಯಲ್ಲಿ ನೀರಿರುವುದರಿಂದ ಫಾಲ್ಸ್ ನಿರ್ಮಿಸುವುದಕ್ಕೆ ಏನೂ ತೊಂದರೆಯಾಗದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪಿಎಂ ಮೋದಿಗೆ ಸ್ವಾಗತ ಎಂದ ಕಾಂಗ್ರೆಸ್!