Select Your Language

Notifications

webdunia
webdunia
webdunia
webdunia

ಇಸ್ಲಾಮಿಕ್ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ

ಇಸ್ಲಾಮಿಕ್ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ
ನವದೆಹಲಿ , ಬುಧವಾರ, 5 ಏಪ್ರಿಲ್ 2023 (13:48 IST)
ನವದೆಹಲಿ : ಭಾರತದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗುತ್ತಿದೆ ಎಂಬ ಇಸ್ಲಾಮಿಕ್ ರಾಷ್ಟ್ರಗಳ ಆರೋಪವನ್ನು ಭಾರತ ತಳ್ಳಿಹಾಕಿದೆ. ಇಸ್ಲಾಮಿಕ್ ರಾಷ್ಟ್ರಗಳು ಕೋಮುವಾದಿ ಮನಸ್ಥಿತಿಯಿಂದ ಹೇಳಿಕೆ ನೀಡುತ್ತಿವೆ. ಭಾರತ ವಿರೋಧಿ ಅಜೆಂಡಾ ಹೊಂದಿವೆ ಎಂದು ಕಿಡಿಕಾರಿದೆ.
 
ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ಇಸ್ಲಾಮಿಕ ರಾಷ್ಟ್ರಗಳು, ಭಾರತದ ಘನತೆಗೆ ಧಕ್ಕೆ ತರುವ ಕೆಲಸ ಮಾಡುತ್ತಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಬೇಸರ ವ್ಯಕ್ತಪಡಿಸಿದ್ದಾರೆ. 

ರಾಮನವಮಿ ಆಚರಣೆ ಸಂದರ್ಭದಲ್ಲಿ ಹಲವಾರು ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹಿಂಸಾಚಾರ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಭಾರತದ ಭಾಗವಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಕೆಟ್ ಧರಿಸಿ ಕೋರ್ಟ್ಗೆ ಹಾಜರಾದ ಇಮ್ರಾನ್ ಖಾನ್?