Select Your Language

Notifications

webdunia
webdunia
webdunia
webdunia

ಜೆಎನ್‍ಯು:ಹಿಂಸಾಚಾರ ನಡೆಸಿದ್ರೆ ವಿದ್ಯಾರ್ಥಿಗಳ ಪ್ರವೇಶ ರದ್ದು

ಜೆಎನ್‍ಯು:ಹಿಂಸಾಚಾರ ನಡೆಸಿದ್ರೆ ವಿದ್ಯಾರ್ಥಿಗಳ ಪ್ರವೇಶ ರದ್ದು
ನವದೆಹಲಿ , ಶುಕ್ರವಾರ, 3 ಮಾರ್ಚ್ 2023 (10:53 IST)
ನವದೆಹಲಿ : ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿ ಜೆಎನ್ಯುನಲ್ಲಿ ನಡೆದ ತೀವ್ರ ಪ್ರತಿಭಟನೆ ಬೆನ್ನಲ್ಲೇ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ತಡೆಯಲು ಅಲ್ಲಿನ ಆಡಳಿತ ಮಂಡಳಿ ನೂತನ ನಿಯಮಗಳನ್ನು ಜಾರಿಗೆ ತಂದಿವೆ.
 
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಹಿಂಸಾಚಾರವನ್ನು ತಡೆಯಲು ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ವಿದ್ಯಾರ್ಥಿಗಳು ಧರಣಿ ನಡೆಸಿದರೇ 20,000 ರೂ. ಗಳಿಂದ 30,000 ರೂ.ಗಳ ದಂಡ ವಿಧಿಸಲಾಗುತ್ತದೆ. ಯಾವುದಾದರೂ ಹಿಂಸಾಚಾರ ಘಟನೆಯನ್ನು ನಡೆಸಿದರೇ ಅವರ ಪ್ರವೇಶವನ್ನು ರದ್ದುಗೊಳಿಸುವುದಾಗಿ ತಿಳಿಸಿದೆ.

ಜೆಎನ್ಯು ವಿದ್ಯಾರ್ಥಿಗಳ ಶಿಸ್ತಿನ ನಿಯಮಗಳು ಹಾಗೂ ಸರಿಯಾದ ನಡುವಳಿಕೆಗೆ ಸಂಬಂಧಿಸಿ 10 ಪುಟಗಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರತಿಭಟನೆಗಳು ಹಾಗೂ ಫೋರ್ಜರಿಗಳಂತಹ ವಿವಿಧ ರೀತಿಯ ಕೃತ್ಯಗಳಿಗೆ ಅನೇಕ ಶಿಕ್ಷೆಯನ್ನು ಕಾಯ್ದಿರಿಸಿದೆ. ಈ ಎಲ್ಲ ನಿಯಮಗಳು ಫೆ. 3ರಂದು ಜಾರಿಗೆ ಬರುವುದಾಗಿ ತಿಳಿಸಿವೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಕಡೆ ಗೆದ್ದ ಕಾಂಗ್ರೆಸ್, ಬಿಜೆಪಿಗೆ ಮುಖಭಂಗ