Select Your Language

Notifications

webdunia
webdunia
webdunia
webdunia

ಮೋದಿಗೆ ಟ್ರಂಪ್ ಫೋನ್ ಕಾಲ್, ದಿಗ್ಗಜರು ಮಾತನಾಡಿದ್ದೇನು?

ಮೋದಿಗೆ ಟ್ರಂಪ್ ಫೋನ್ ಕಾಲ್, ದಿಗ್ಗಜರು ಮಾತನಾಡಿದ್ದೇನು?
ನವದೆಹಲಿ , ಬುಧವಾರ, 25 ಜನವರಿ 2017 (08:35 IST)
ಅಮೇರಿಕಾದ 45ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ಮಂಗಳವಾರ ರಾತ್ರಿ ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.

ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ (ವಾಷಿಂಗ್ಟನ್ ಕಾಲಮಾನ ಮಧ್ಯಾಹ್ನ 1 ಗಂಟೆ) ಮೋದಿ ಅವರ ಜತೆ ಮಾತನಾಡಿದ ಟ್ರಂಪ್ ಉಭಯ ದೇಶಗಳ ಸಂಬಂಧ ವೃದ್ಧಿ, ಆರ್ಥಿಕ ಮತ್ತು ರಕ್ಷಣಾ ಸಹಕಾರದ ಬಗ್ಗೆ ಸಮಾಲೋಚನೆ ನಡೆಸಿದರು. ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವಾಗ ಅಮೇರಿಕಾ ಭಾರತವನ್ನು ತನ್ನ ನಿಜವಾದ ಸ್ನೇಹಿತನಂತೆ ಪರಿಗಣಿಸುತ್ತದೆ ಎಂದು ಅವರು ಹೇಳಿದರು, ಎಂದು ತಿಳಿದು ಬಂದಿದೆ.
 
ಅಷ್ಟೇ ಅಲ್ಲದೇ ಅಮೇರಿಕಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತದೆ. 
 
ತಾನು ಕೂಡ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದ್ದೇನೆ. ಮುಂಬರುವ ದಿನಗಳಲ್ಲಿ ಜೊತೆಯಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ, ಎಂದು ಪ್ರಧಾನಿ ಮೋದಿ ಟ್ವೀಟರ್ ಮೂಲಕ ತಿಳಿಸಿದ್ದಾರೆ. 
 
ಅಮೇರಿಕಾದ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಟ್ರಂಪ್ ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮನೋಹರ ಪರಿಕ್ಕರ್ ಗೋವಾ ಸಿಎಂ ಅಭ್ಯರ್ಥಿ?