Publish Date: Wed, 25 Jan 2017 (07:42 IST)
Updated Date: Wed, 25 Jan 2017 (07:47 IST)
ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಗೋವಾದಲ್ಲಿ ಅಧಿಕಾರವನ್ನು ಮರಳಿ ಪಡೆಯುವ ಪಣ ತೊಟ್ಟಿರುವ ಬಿಜೆಪಿ ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಗಳಿವೆ.
ಹೀಗೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಳಿವು ನೀಡಿದ್ದಾರೆ.
ವಾಸ್ಕೋ ನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅಮಿತ್ ಶಾ, ಗೋವಾದ ಜನರು ಪರಿಕ್ಕರ್ ರಾಜ್ಯಕ್ಕೆ ಮರಳಬೇಕು ಎಂದು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಮುಂದಿನ ಸರ್ಕಾರ ಪರಿಕ್ಕರ್ ನೇತೃತ್ವದಲ್ಲಿ ಕಾರ್ನ ನಿರ್ವಹಿಸಲಿದೆ ಎನ್ನುವ ಮೂಲಕ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸುಳಿವು ಕೊಟ್ಟಿದ್ದಾರೆ.
ಪರಿಕ್ಕರ್ ರೂಪದಲ್ಲಿ ನೀವು ದೇಶಕ್ಕೆ ಬಹುದೊಡ್ಡ ಆಸ್ತಿಯನ್ನು ಕೊಡುಗೆಯಾಗಿ ನೀಡಿದ್ದೀರಿ. ದೆಹಲಿ ಮತ್ತು ಗೋವಾದಲ್ಲೆರಡು ಕಡೆ ಪರಿಕ್ಕರ್ ಅಗತ್ಯವಿದೆ. ಪ್ರಧಾನಿ ಮೋದಿ ಪರಿಕ್ಕರ್ ದೆಹಲಿಯಲ್ಲಿರಲಿ ಎಂದು ಬಯಸುತ್ತಾರೆ. ಚುನಾವಣೆ ಮುಗಿದ ಬಳಿಕ ಅವರೆಲ್ಲಿರಬೇಕೆಂದು ನಿರ್ಧರಿಸುತ್ತೇವೆ, ಎಂದು ಶಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.