Select Your Language

Notifications

webdunia
webdunia
webdunia
webdunia

ತಮಿಳುನಾಡು ಮುಖ್ಯಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ

ತಮಿಳುನಾಡು ಮುಖ್ಯಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ
ಚೆನ್ನೈ , ಬುಧವಾರ, 21 ಡಿಸೆಂಬರ್ 2016 (15:46 IST)
ತಮಿಳುನಾಡು ಸರ್ಕಾರದ ಮುಖ್ಯಕಾರ್ಯದರ್ಶಿ ರಾಮ್ ಮೋಹನ್ ಮನೆಯಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು 2,000ರ ಮುಖಬೆಲೆಯ ಹೊಸ ನೋಟುಗಳುಳ್ಳ 1 ಕೋಟಿ ನಗದು ಮತ್ತು ಬರೊಬ್ಬರಿ 40 ಕೆಜಿ ಚಿನ್ನ ಪತ್ತೆಯಾಗಿದೆ.
ಚೆನ್ನೈನ ಅಣ್ಣಾನಗರದಲ್ಲಿರುವ ಮೋಹನ್ ನಿವಾಸಕ್ಕೆ ಮುಂಜಾನೆ 5.30ರ ಸುಮಾರಿಗೆ ದಾಳಿ ಕೈಗೊಳ್ಳಲಾಗಿದ್ದು ದೊರೆತಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
 
ಮೋಹನ್ ನಿವಾಸವಷ್ಟೇ ಅಲ್ಲ, ಮಗ, ಸಂಬಂಧಿಕರು ಮತ್ತು ಅವರ ಜತೆ ಸಂಪರ್ಕ ಹೊಂದಿರುವ 13 ಕಡೆಗಳಲ್ಲಿ ಅಂದರೆ ಚೆನ್ನೈ, ಬೆಂಗಳೂರು ಮತ್ತು ಆಂಧ್ರದ ಚಿತ್ತೂರಿನಲ್ಲಿ ಒಂದೇ ಬಾರಿ ದಾಳಿ ನಡೆಸಲಾಗಿದೆ. 
 
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ಉದ್ಯಮಪತಿಗಳಾದ ಜೆ. ಶೇಖರ್ ರೆಡ್ಡಿ, ಶ್ರೀನಿವಾಸಲು ಮತ್ತು ಪ್ರೇಮ್ ಅವರ ನಿವಾಸದ ಮಲೆ ದಾಳಿ ಮಾಡಿ ಒಟ್ಟು 177ಕೋಟಿ ಚಿನ್ನ, ರದ್ದುಗೊಂಡಿರುವ 500 ಮತ್ತು 1,000 ಮುಖಬೆಲೆಯ ನೋಟುಗಳುಳ್ಳ 96 ಕೋಟಿ ಮತ್ತು 2,000 ರೂಪಾಯಿ ಹೊಸ ನೋಟುಗಳ ಕಂತೆಗಳುಳ್ಳ 34 ಕೋಟಿಯನ್ನು ವಶಕ್ಕೆ ಪಡೆದಿದ್ದರು. 
 
ಗುತ್ತಿಗೆದಾರರಾಗಿರುವ ರೆಡ್ಡಿ ತಮಿಳುನಾಡು ಸರ್ಕಾರಕ್ಕೆ ಬಹಳಷ್ಟು ಕೆಲಸಗಳನ್ನು ಮಾಡಿಕೊಟ್ಟಿದ್ದು, ತಿರುಪತಿ ದೇವಸ್ಥಾನ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಈ ಉದ್ಯಮಿ ಜತೆ ರಾಮ್ ಮೋಹನ್ ಸಂಪರ್ಕ ಹೊಂದಿರುವುದನ್ನು ಸಾಬೀತುಪಡಿಸುವ ಕೆಲ ದಾಖಲೆಗಳು ಸಿಕ್ಕಿದ್ದವು. ಹೀಗಾಗಿ ರಾಮ್ ಮೋಹನ್ ನಿವಾಸದ ಮೇಲೆ ಇಂದು ದಾಳಿ ನಡೆಸಲಾಗಿದೆ. 
 
2016ರಲ್ಲಿ ರಾಮ ಮೋಹನ್ ಮುಖ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಈ ಹಿಂದೆ ಅವರು ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ವಿರುದ್ಧದ ಆರೋಪಕ್ಕೆ ರಾಹುಲ್ ಬಳಿ ಆಧಾರವಿಲ್ಲ: ಬಿಜೆಪಿ