Select Your Language

Notifications

webdunia
webdunia
webdunia
webdunia

ಮೋದಿ ವಿರುದ್ಧದ ಆರೋಪಕ್ಕೆ ರಾಹುಲ್ ಬಳಿ ಆಧಾರವಿಲ್ಲ: ಬಿಜೆಪಿ

ಮೋದಿ ವಿರುದ್ಧದ ಆರೋಪಕ್ಕೆ ರಾಹುಲ್ ಬಳಿ ಆಧಾರವಿಲ್ಲ: ಬಿಜೆಪಿ
ಅಹಮದಾಬಾದ್ , ಬುಧವಾರ, 21 ಡಿಸೆಂಬರ್ 2016 (12:52 IST)
ಪ್ರಧಾನಿ ಮೋದಿ ವೈಯಕ್ತಿಕ ಭ್ರಷ್ಟಾಚಾರ ಮಾಡಿರುವ ಮಾಹಿತಿ ಇದೆ ಎಂದು ಹೇಳುತ್ತಿರುವ ರಾಹುಲ್ ಅದನ್ನು ಸಾಬೀತು ಪಡಿಸುವ ಯಾವುದೇ ದಾಖಲೆಗಳನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ. 

ರಾಹುಲ್ ಪ್ರಧಾನಿ ಮೋದಿ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸುತ್ತಾರೆ. ಆದರೆ ಸಾಕ್ಷ್ಯವನ್ನು ನೀಡುವುದಿಲ್ಲ. ಪ್ರಧಾನಿ ನೋಟು ನಿಷೇಧದ ಐತಿಹಾಸಿಕ ನಿರ್ಧಾರವನ್ನು ಕೈಗೊಂಡ ಬಳಿಕ, ತಾವು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪವಾಗುವುದೆಂದು ಹೇಳುವ ಮೂಲಕ ರಾಹುಲ್ ಸಂಸತ್ತಿಗೆ ಅಪಹಾಸ್ಯ ಮಾಡಿದ್ದಾರೆ ಎಂದು ಬಿಜೆಪಿ ವಕ್ತಾರ ಭರತ್ ಪಾಂಡ್ಯ ಹೇಳಿದ್ದಾರೆ.
 
ಕಳೆದ ವರ್ಷ ನಿರ್ಣಾಯಕ ಬಜೆಟ್ ಕಲಾಪಕ್ಕೆ ಎರಡು ತಿಂಗಳ ಮೊದಲು ಗಾಂಧಿ ರಹಸ್ಯ ರಜೆಗೆ ಹೋಗಿದ್ದರು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ. 
 
ತಾನು ಪ್ರಧಾನಿ ಮೋದಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಮಾಹಿತಿ ಹೊಂದಿದ್ದೇನೆ ಎಂದು ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಬಾಂಬ್ ಸಿಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರ ಬಣ್ಣ ಬಯಲಾಗುತ್ತದೆ ಎನ್ನಲು ಯಡಿಯೂರಪ್ಪ ಸಿಬಿಐ ನಿರ್ದೇಶಕರೇ?: ಸಚಿವ ಪಾಟಿಲ್ ಕಿಡಿ