Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ : ಕಥೆ ಕಟ್ಟಿ ಸಿಕ್ಕಿಬಿದ್ದ ಮಹಿಳಾ ಪೊಲೀಸ್

ಅಕ್ರಮ ಸಂಬಂಧ : ಕಥೆ ಕಟ್ಟಿ ಸಿಕ್ಕಿಬಿದ್ದ ಮಹಿಳಾ ಪೊಲೀಸ್
ಮುಂಬೈ , ಶುಕ್ರವಾರ, 17 ಜುಲೈ 2020 (14:01 IST)
ವಿವಾಹಿತ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳಾ ಕಾನ್ಸಟೇಬಲ್ ಸಿಕ್ಕಿ ಬಿದ್ದ ಘಟನೆ ನಡೆದಿದೆ.

ಠಾಣೆಯಲ್ಲಿ ಕೆಲಸ ಮಾಡುವ ಕಾನ್ಸಟೇಬಲ್ ಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಮಹಿಳಾ ಕಾನ್ಸಟೇಬಲ್ ಗೆ ಕ್ವಾರಂಟೈನ್ ಆಗಬೇಕೆಂದು ಹೇಳಿದ್ದಾರೆ.

ಆದರೆ ತನ್ನೊಂದಿಗೆ ತನ್ನ ಪತಿಯನ್ನೂ ಕ್ವಾರಂಟೈನ್ ಮಾಡಬೇಕೆಂದು ಮಹಿಳಾ ಕಾನ್ಸಟೇಬಲ್ ಹಠ ಹಿಡಿದಿದ್ದಾರೆ.

ಹೀಗಾಗಿ ಮಹಿಳಾ ಕಾನ್ಸಟೇಬಲ್ ಹೇಳಿದ ವ್ಯಕ್ತಿಯನ್ನು ಆಕೆಯ ಜೊತೆಗೆ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಆ ವ್ಯಕ್ತಿಯ ಪತ್ನಿ ಕ್ವಾರಂಟೈನ್ ಕೇಂದ್ರಕ್ಕೆ ಬಂದಾಗಲೇ ಮಹಿಳಾ ಕಾನ್ಸಟೇಬಲ್ ಳ ಅಕ್ರಮ ಸಂಬಂಧ ಹೊರಬಿದ್ದಿದೆ.

ವಿವಾಹಿತ ವ್ಯಕ್ತಿಯನ್ನು ತನ್ನ ಪತಿ ಎಂದು ಮಹಿಳಾ ಕಾನ್ಸಟೇಬಲ್ ಸುಳ್ಳು ಹೇಳಿದ್ದು, ಈ ಕುರಿತು ಅಧಿಕಾರಿಗಳು ತನಿಖೆಗೆ ಆದೇಶ ಹೊರಡಿದ್ದಾರೆ.

ನಾಗ್ಪುರ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್ಸಟೇಬಲ್ ಕೆಲಸ ಮಾಡುತ್ತಿದ್ದಳು.



Share this Story:

Follow Webdunia kannada

ಮುಂದಿನ ಸುದ್ದಿ

ಭಗವಂತ ಬಂದರೂ ಬೆಂಗಳೂರನ್ನು ಕಾಪಾಡೋದಿಲ್ಲ