Select Your Language

Notifications

webdunia
webdunia
webdunia
webdunia

‘TikTok’ಅಕ್ರಮ ಸಂಬಂಧ ಬಯಲು!

‘TikTok’ಅಕ್ರಮ ಸಂಬಂಧ ಬಯಲು!
ಬೆಂಗಳೂರು , ಗುರುವಾರ, 11 ನವೆಂಬರ್ 2021 (11:36 IST)
2ನೇ ಪತ್ನಿಯಾಗಿದ್ದ ನೇತ್ರಾ ಎಂಬುವರು ಮಧ್ಯರಾತ್ರಿ ತುಮಕೂರು ರಸ್ತೆಯ ಸಮೀಪದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ಆಗಮಿಸಿ,
ತನ್ನ ಗಂಡ ಪಾಲರ್ ಸ್ವಾಮಿ ಅಲಿಯಾನ್ ಸ್ವಾಮಿ ರಾಜ್ (50) ಅವರನ್ನು ಕೊಂದಿರುವುದಾಗಿ ಪೊಲೀಸರ ಎಂದು ಶರಣಾಗಿದ್ದರು. ಈಗ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಆಗಿರುವ ನನ್ನ ಗಂಡ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಸೆಕ್ಸ್ ವಿಚಾರವಾಗಿ ಅತಿರೇಕದ ವರ್ತನೆಯಿಂದ ಬೇಸತ್ತು ಕೊಲೆ ಮಾಡಿರೋದಾಗಿ ಪೊಲೀಸರ ಎದುರು 2ನೇ ಹೆಂಡತಿ ನೇತ್ರಾ ಹೇಳಿಕೊಂಡಿದ್ದರು. ಆದರೆ ಅಸಲಿ ಸಂಗತಿ ಈಗ ಬಯಲಾಗಿದೆ.
ಮಾದನಾಯಕನಹಳ್ಳಿ ಪೊಲೀಸರು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಕಾರ್ಯ ನಡೆಸಿ ಪ್ರಕರಣವನ್ನು ಬೇಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಸ್ವಾಮಿರಾಜ್ ಕೊಲೆಗೆ ಸಹಕರಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಿಯಕರ ಹಾಗೂ ಅಕ್ಕನ ಮಗನ ಸಹಾಯದೊಂದಿಗೆ ನೇತ್ರಾ ಗಂಡನನ್ನು ಕೊಲೆ ಮಾಡಿರುವುದು ಬಯಲಾಗಿದೆ. ಕೊಲೆಗೆ ಸಹಕರಿಸಿದ ಪ್ರಿಯಕರ ಭರತ್ ಅಲಿಯಾನ್ ಅಚ್ಚು( 30) ಹಾಗೂ ನೇತ್ರಾ ಅಕ್ಕನ ಮಗ ವಿಜಯ್ನ ಪೊಲೀಸರು ಬಂಧಿಸಿದ್ದಾರೆ. ಭರತ್ ಕೆ.ಆರ್.ಪುರಂ ಬಿದರನಹಳ್ಳಿಯ ನಿವಾಸಿ ಹಾಗೂ ವಿಜಯ್ ಸುಂಕದಕಟ್ಟೆಯಲ್ಲಿ ನೆಲೆಸಿದ್ದ.
ಕಳೆದೊಂದು ವರ್ಷದ ಹಿಂದೆ ಟಿಕ್ ಟಾಕ್ ನಿಂದ ಭರತ್ ಮತ್ತು ನೇತ್ರಾ ಪರಿಚಿತರಾಗಿದ್ದರು. ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ವಾರದ ಹಿಂದೆ ಸ್ವಾಮಿರಾಜ್ ಮರ್ಡರ್ ಗೆ ಸ್ಕೆಚ್ ಹಾಕಿದ್ದ ನೇತ್ರಾ, ಹತ್ಯೆಗೆ ಲಾಂಗ್ ಖರೀದಿಸಲು ಕೆ.ಆರ್.ಮಾರುಕಟ್ಟೆಗೆ ಹೋಗಿದ್ದರು. ಲಾಂಗ್ ಬದಲು ರಿಂಚ್ ಖರೀದಿಸಿ ತಂದಿದ್ದರು.
ಪ್ರಿಯಕರ ಭರತ್ ಮತ್ತು ವಿಜಯ್ ನನ್ನು ಬಚಾವ್ ಮಾಡಲು ನೇತ್ರಾ ಪೊಲೀಸರಿಗೆ ಶರಣಾಗಿದ್ದರು. ವಕೀಲರನ್ನ ಹುಡುಕಿ ಜಾಮೀನು ಪಡೆಯಲು ವಿಜಯ್ ಗೆ 50 ಸಾವಿರ ಹಣವನ್ನು ಸಹ ನೇತ್ರಾ ನೀಡಿದ್ದರು. ಆದ್ರೆ ಪೊಲೀಸರ ತನಿಖೆ ವೇಳೆ ಭರತ್ ಮತ್ತು ವಿಜಯ್ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ರಿಂಚ್ ಮತ್ತು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ರಾಜ್ 25 ವರ್ಷಗಳ ಹಿಂದೆ ಟಿ.ಆರ್.ಸತ್ಯಕುಮಾರಿ ಎಂಬುವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಬಳಿಕ ಬ್ಯೂಟಿಷಿಯನ್ ನೇತ್ರಾ ಅವರ ಪರಿಚಯವಾಗಿ 6 ವರ್ಷಗಳ ಹಿಂದೆ 2ನೇ ವಿವಾಹವಾಗಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಚಾಲಕರಿಗೆ ಸಂತಸ, ಜನಸಾಮಾನ್ಯನಿಗೆ ಇನ್ನಷ್ಟು ಹೊರೆ!