ಚಂಡೀಗಡ : ಪಂಜಾಬ್ನ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ `ಭ್ರಷ್ಟಾಚಾರ ಮುಕ್ತ ಸಹಾಯವಾಣಿ ಪ್ರಾರಂಭಿಸುತ್ತಿದ್ದು, ಮಾರ್ಚ್ 23ರಂದು ಅನಾವರಣಗೊಳ್ಳಲಿದೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 23ರಂದು ಸಹಾಯವಾಣಿ ಪ್ರಾರಂಭಿಸಲಾಗುತ್ತದೆ ಎಂದೂ ಅವರು ಭರವಸೆ ನೀಡಿದ್ದಾರೆ.
`ಸಹಾಯವಾಣಿ ಸಂಖ್ಯೆಯು ನನ್ನ ವೈಯಕ್ತಿಕ ಸಂಪರ್ಕ ಸಂಖ್ಯೆಯಾಗಿದ್ದು, ಯಾರೇ ಲಂಚ ಕೇಳಿದರೂ ಅದರ ಆಡಿಯೋ, ವಿಡಿಯೋ ಅನ್ನು ಈ ಸಂಖ್ಯೆಗೆ ಕಳುಹಿಸಿ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.