Publish Date: Thu, 10 Mar 2022 (13:00 IST)
Updated Date: Thu, 10 Mar 2022 (13:04 IST)
ಚಂಡೀಗಢ : ಪಂಜಾಬ್ ಮುಖ್ಯ ಮಂತ್ರಿ ಚರಣ್ಜಿತ್ ಸಿಂಗ್(ಚನ್ನಿ) ಇಂದು ಗವರ್ನರ್ ಬನ್ವರಿಲಾಲ್ ಪುರಾಹಿತ್ ಅವರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಮುಂಜಾನೆ ಚರಣ್ಜಿತ್ ತಮ್ಮ ಚಂಡೀಗಢದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ಪಂಚರಾಜ್ಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಚರಣ್ಜಿತ್ ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಾದ ಚಮಕೌರ್ ಸಾಹಿಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಸದ್ಯ ಹಿನ್ನೆಡೆಯಾಗಿದೆ.
ಇದೀಗ ಪಂಜಾಬ್ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು, ಪಂಜಾಬ್ನ ಮೊದಲ ದಲಿತ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ರಾಜಿನಾಮೆ ನೀಡಲಿದ್ದಾರೆ.