ದೇಶದ ಜನತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಪ್ಪು(ಮಕ್ಕಳಾಟಿಕೆ) ಎಂದು ಕರೆಯುತ್ತಾರೆ ಎನ್ನುವ ಆರೋಪವನ್ನು ಒಪ್ಪಿಕೊಂಡ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಆದರೆ, ಪ್ರಧಾನಿ ಮೋದಿಯನ್ನು ಜನತೆ ಫೇಕೂ ಎಂದು ಕರೆಯುವುದನ್ನು ಮರೆಯುವಂತಿಲ್ಲವೆಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯವರನ್ನು ನೇಮಕ ಮಾಡಲಾಗುವುದು ಎನ್ನುವ ಕುರಿತಂತೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ರಾಹುಲ್ ಗಾಂಧಿಯವರಲ್ಲಿ ನಾಯಕತ್ವದ ಯಾವ ಗುಣಗಳಿವೆ ಪಟ್ಟಿ ಮಾಡಿ ಎಂದು ಸುದ್ದಿಗಾರರು ಸಿಂಗ್ ಅವರನ್ನು ಕೋರಿದಾಗ, ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾದಲ್ಲಿ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಮತ್ತು ಅನುಭವ ಎರಡೂ ಇದೆ ಎಂದರು.
ಕಾಂಗ್ರೆಸ್ ಪಕ್ಷ ಸದಾ ಯುವಕರಿಗೆ ಅವಕಾಶ ನೀಡಿದೆ. ಭಾರತ ದೇಶ ಯುವಕರ ದೇಶವಾಗಿದೆ. ಆದ್ದರಿಂದ ಯುವಕರಿಗೆ ಹೊಂದಾಣಿಕೆಯಾಗುವಂತಹ ಆಲೋಚನೆಗಳನ್ನು ಜಾರಿಗೊಳಿಸಬೇಕಾಗಿದೆ. ಯುವಕರ ದೇಶದಲ್ಲಿ ನಾಯಕನು ಕೂಡಾ ಯುವಕನಾಗಿರಬೇಕು ಎಂದರು.
ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರಾಗಿಸುವ ಸಮಯದ ಕುರಿತಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.