Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ: ಮೂರು ವರ್ಷದ ಮಗುವಿನ ಹತ್ಯೆಗೈದ ತಾಯಿ

ಅನೈತಿಕ ಸಂಬಂಧ: ಮೂರು ವರ್ಷದ ಮಗುವಿನ ಹತ್ಯೆಗೈದ ತಾಯಿ
ಕೊಯಿಮತ್ತೂರು , ಸೋಮವಾರ, 6 ಜೂನ್ 2016 (12:35 IST)
ಕೆಟ್ಟ ಮಕ್ಕಳು ಜನಿಸಬಹುದು. ಆದರೆ ಕೆಟ್ಟ ತಾಯಿ ಎಂದಿಗೂ ಇರಲಾರಳು ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ಕೆಲ ಘಟನೆಗಳನ್ನು ಈ ಮಾತಿನ ಅರ್ಥಗೆಡಿಸುತ್ತಿವೆ. ಯುವಕನೊಂದಿಗೆ ತನ್ನ ಅನೈತಿಕ ಸಂಬಂಧವನ್ನು ಮುಂದುವರೆಸಲು ತಾಯಿಯೋರ್ವಳು ತನ್ನ ಮೂರು ವರ್ಷದ ಮಗುವನ್ನೇ ಹತ್ಯೆಗೈದ ಹೇಯ ಘಟನೆ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದಿದೆ. 
 
ಜಿಲ್ಲೆಯ ಸೆಲ್ವಪುರಮ್ ನಿವಾಸಿಯಾಗಿರುವ ಮಹಿಳೆ ದಿವ್ಯಾ ಕಳೆದ ವರ್ಷ ಗಂಡನಿಂದ ಬೇರ್ಪಟ್ಟು ತನ್ನ ತವರಿನಲ್ಲಿ ವಾಸವಾಗಿದ್ದಳು. ಆಕೆಗೆ ಮೂರು ವರ್ಷದ ಹೆಣ್ಣು ಮಗು ಸಹ ಇತ್ತು. 
 
ಸೇಲ್ಸ್ ಕೆಲಸಕ್ಕೆ ಹೋಗುತ್ತಿದ್ದ ಆಕೆಗೆ ಯುವಕನೊಬ್ಬನ ಪರಿಚಯವಾಗಿದ್ದು ಬಳಿಕ ಅವರಿಬ್ಬರಲ್ಲಿ ಪ್ರೇಮ ಸಂಬಂಧ ಬೆಳೆದಿದೆ. ಈ ವಿಷಯ ಆಕೆಯ ತಂದೆ-ತಾಯಿಗೆ ಗೊತ್ತಾಗಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಸಂಬಂಧವನ್ನು ಮುಂದುವರೆಸದಂತೆ ಎಚ್ಚರಿಕೆ ನೀಡಿದ್ದರು. 
 
ತಂದೆ-ತಾಯಿಗಳ ಈ ಎಚ್ಚರಿಕೆ ದಿವ್ಯಾಳಿಗೆ ಮಗಳೇ ತನ್ನ ಬದುಕಿಗೆ ತಡೆಗೋಡೆ ಎಂಬ ಯೋಚನೆಯನ್ನು ಬೆಳೆಸಿಕೊಳ್ಳಲು ಕಾರಣವಾಯಿತು. ಹೀಗಾಗಿ ಆಕೆಯನ್ನು ಮುಗಿಸುವ ಸಂಚು ರೂಪಿಸಿದ ಅವಳು ರಾತ್ರಿ ಮಲಗಿದ್ದಾಗ ಉಸಿರುಗಟ್ಟಿಸಿ ಕೊಲೆಗೈದಿದ್ದಾಳೆ.
 
ಮರುದಿನ ಆಕೆಯ ಸಹೋದರ ಮಗು ಎಷ್ಟು ಹೊತ್ತಾದರೂ ಏಳುತ್ತಿಲ್ಲ, ಜತೆಗೂ ಅಲ್ಲಾಡದೆ ಮಲಗಿರುವುದನ್ನು ನೋಡಿದ್ದಾನೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿ ವೈದ್ಯರು ಈಗಾಗಲೇ ಅದು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ. 
 
ತನ್ನ ಅಕ್ಕನ ಮೇಲೆಯೇ ಸಂಶಯಗೊಂಡ ದಿವ್ಯಾಳ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ದಿವ್ಯಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಸ್ತುವಾರಿ ಸಚಿವರಿಂದ ವಸೂಲಿ ಕಾರ್ಯಕ್ರಮ ಎಚ್.ಡಿ.ರೇವಣ್ಣ ಆರೋಪ