Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಹುದ್ದೆ ತ್ಯಜಿಸಿದರೆ ಅವರ ಹಿಂದೆಯೇ ಹೋಗಲು ಈ ನಾಯಕನೂ ರೆಡಿ!

ರಾಹುಲ್ ಗಾಂಧಿ ಹುದ್ದೆ ತ್ಯಜಿಸಿದರೆ ಅವರ ಹಿಂದೆಯೇ ಹೋಗಲು ಈ ನಾಯಕನೂ ರೆಡಿ!
ನವದೆಹಲಿ , ಬುಧವಾರ, 29 ಮೇ 2019 (11:32 IST)
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಲು ನಿರ್ಧರಿಸಿದರೆ ಅವರ ಹಿಂದೆಯೇ ಹೋಗಲು ಸ್ನೇಹಿತ ಸಚಿನ್ ಪೈಲಟ್ ಕೂಡಾ ರೆಡಿಯಾಗಿದ್ದಾರೆ.


ಒಂದು ರಾಹುಲ್ ತಮ್ಮ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೆ ತಾವೂ ರಾಜಸ್ಥಾನ ಉಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಸಚಿನ್ ಹೇಳಿಕೊಂಡಿದ್ದಾರಂತೆ.

ರಾಹುಲ್ ಪರಮಾಪ್ತ ಬಳಗದವರಲ್ಲಿ ಒಬ್ಬರಾಗಿರುವ ಸಚಿನ್ ಪೈಲಟ್ ಕಾಂಗ್ರೆಸ್ ಭವಿಷ್ಯದ ನಾಯಕನಾಗುವ ಸಾಮರ್ಥ್ಯ ಉಳ್ಳವರು. ಹೀಗಾಗಿ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರೆ ಸಚಿನ್ ಪೈಲಟ್ ಗೆ ಕಾಂಗ್ರೆಸ್ ನ ಪ್ರಮುಖ ಹುದ್ದೆ ಸಿಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

6 ವರ್ಷದ ಬಾಲಕಿಯ ಮೇಲೆ ಸಂಬಂಧಿಕನಿಂದಲೇ ಅತ್ಯಾಚಾರ