Publish Date: Mon, 09 Oct 2017 (08:19 IST)
Updated Date: Mon, 09 Oct 2017 (08:21 IST)
ನವದೆಹಲಿ: ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಏಕಕಾಲಕ್ಕೆ ಯುದ್ಧ ಮಾಡಲು ಸಿದ್ಧ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ವಾಯುಸೇನೆ ಮುಖ್ಯಸ್ಥ ಬಿಎಸ್ ಧನೋವಾ ಯಾವುದೇ ಕ್ಷಣದಲ್ಲೂ ಯುದ್ಧಕ್ಕೆ ವಾಯುಸೇನೆ ಸನ್ನದ್ಧವಾಗಿದೆ ಎಂದಿದ್ದಾರೆ.
ಅಗತ್ಯ ಬಂದರೆ ಈಗಲೇ ಯುದ್ಧ ಮಾಡಲೂ ನಾವು ಸಿದ್ಧರಾಗಿದ್ದೇವೆ ಎಂದು ವಾಯುಸೇನೆಯ 85 ನೇ ವಾರ್ಷಿಕೋತ್ಸವದಲ್ಲಿ ಧನೋವಾ ಹೇಳಿಕೆ ನೀಡಿದ್ದಾರೆ.
ಕಳೆದ ಬಾರಿ ಧನೋವಾ ಹೇಳಿಕೆ ಪಾಕಿಸ್ತಾನ ಕೂಡಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಇದೀಗ ಮತ್ತೊಮ್ಮೆ ಧನೋವಾ ಯುದ್ಧದ ಹೇಳಿಕೆ ನೀಡಿದ್ದಾರೆ. ಇದಕ್ಕೆ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೋ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ